ಕೃಷಿಕ ಸಂಘದಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಅಮೆರಿಕದೊಂ ದಿಗಿನ ಒಪ್ಪಂದವನ್ನು ಭಾರತ ಹಿಂತೆಗೆಯಬೇಕೆAದು ಒತ್ತಾಯಿಸಿ, ಅಮೆರಿಕ ಅಧ್ಯಕ್ಷ ಮತ್ತು ಭಾರತದ ಪ್ರಧಾನಿ ವಿರುದ್ಧ ಎಡರಂಗ ಕೃಷಿಕ ಸಂಘಟನೆಗಳ ನೇತೃತ್ವ ದಲ್ಲಿ ಹೊಸಂಗಡಿ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದರು. ಕಿಸಾನ್ ಸಭಾ ಜಿಲ್ಲಾ ಕಾರ್ಯ ದರ್ಶಿ ಕೆ. ಕುಂಞಕಣ್ಣನ್ ಉದ್ಘಾಟಿಸಿ ಮಾತನಾಡಿದರು. ಸಿ. ಪಿ. ಐ ನೇತಾರ ಜಯರಾಮ ಬಲ್ಲಂ ಗುಡೇಲು ಸ್ವಾಗತಿಸಿ, ನೇತಾರರಾದ ಕೆ. ಕಮಲಾಕ್ಷ, ಎಂ.ರಾಮಚAದ್ರ,  ಪ್ರಶಾಂತ್ ಕನಿಲ, ಅಹ್ಮದ್ ಹುಸೇನ್  ಮಾಸ್ಟರ್, ಬಿ.ಎಂ. ಕರುಣಾಕರ ಶೆಟ್ಟಿ, ಹರೀಶ್ ಶೆಟ್ಟಿ, ಕಡಂಬಾರ್, ಲಾರೆನ್ಸ್, ಚನಿಯ ಕೊಮ್ಮಂಗಳ, ರಾಮಚಂದ್ರ ಟಿ., ಮೀಂಜ ಪಂಚಾಯತ್ ಸದಸ್ಯ ಜನಾರ್ದನ ಕುಳೂರು, ಪ್ರಭಾಕರ ಶೆಟ್ಟಿ , ಎಸ್. ಎಫ್. ಐ . ಕಾರ್ಯದರ್ಶಿ ರೋಷನ್ ವಿ.ವಿ. ನೇತೃತ್ವ ವಹಿಸಿದ್ದರು.

RELATED NEWS

You cannot copy contents of this page