ಕಾಸರಗೋಡು: ಕಾರ್ಮಿಕ ವಿರುದ್ಧ ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕು, ಬಿಜೆಪಿ ಸರಕಾರದ ಕಾರ್ಮಿಕ ವಿರುದ್ಧ ಕ್ರಮಗಳನ್ನು ಹಿಂತೆಗೆಯಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟು ಸಂಯುಕ್ತ ಟ್ರೇಡ್ ಯೂನಿಯನ್ ಸಮಿತಿ ಮೆರವಣಿಗೆ ಹಾಗೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಬಿಎಸ್‌ಎನ್‌ಎಲ್‌ನ ಮುಂಭಾಗದಲ್ಲಿ ನಡೆದ ಧರಣಿಯನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಟಿ.ಕೆ. ರಾಜನ್ ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಪಿ.ವಿ. ತಂಬಾನ್, ಕೆ. ಭಾನುಪ್ರಕಾಶ್, ಟಿ. ಪ್ರಕಾಶನ್, ವಿ.ವಿ. ಪ್ರಸನ್ನ ಕುಮಾರಿ, ಬಿಜು ಉಣ್ಣಿತ್ತಾನ್, ಶಿಜು ಕಣ್ಣನ್ ಮಾತನಾಡಿದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ. ಮಣಿಮೋಹನನ್ ಸ್ವಾಗತಿಸಿದರು.







