ಕಾಸರಗೋಡು: ಹೊಸದುರ್ಗ ಮತ್ತು ನೀಲೇಶ್ವರದಲ್ಲಿ ಸಚಿವ ಒ.ಜೆ.ಜನೀಶರ ಕಾರನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿ ಸಿಪಿಎಂ ಬ್ರಾಂಚ್ ಕಾರ್ಯದರ್ಶಿ, ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗದಲ್ಲಿ ಸಚಿವರ ಕಾರು ತಡೆದ ನಿಲ್ಲಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಒಳಿಂಞ್ಞವಳಪ್ಪು ಬ್ರಾಂಚ್ ಕಾರ್ಯದರ್ಶಿ ಅಖಿಲ್ ಒಳಿಂಞ್ಞವಳಪ್ (32), ಡಿವೈಎಫ್‌ಐ ಹೊಸದುರ್ಗ ವಲಯ ಕೋಶಾಧಿಕಾರಿ ಸಚಿನ್ ಕೋಟ್ಟಲ್ ಪಳ್ಳ (29), ಹೊಸದುರ್ಗ ಬ್ಲೋಕ್ ಜತೆ ಕಾರ್ಯದರ್ಶಿ ನಿಧಿನ್ ಕುಶಾಲ್ ನಗರ (33), ಅನೀಶ್ ಚಾಮುಂಡಿಕುನ್ನು (29) ಮತ್ತು ಜನೀಶ್ ಕಿಳಂಕುಂಕರ (27) ಎಂಬಿವರನ್ನು ಬಂಧಿಸಿ ಜಾಮೀನು ರಹಿತ ಪ್ರಕರಣ ದಾಖಲಿಸಾಗಿದೆ. ಬಂಧಿತರನ್ನು ನಂತರ ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶದಂತೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ 1೦ ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಇದೇ ರೀತಿ ತೃಕರಿಪುರದಲ್ಲ್ಲಿ ಸಚಿವ ಜನೀಶ್‌ರ ಕಾರು ತಡೆದು ಪ್ರತಿಭಟಿಸಿದುದಕ್ಕೆ ಸಂಬಂಧಿಸಿ ಚಂದೇರ ಪೊಲೀಸರು ಒಟ್ಟು 25ಮಂದಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ?ಟಿ. ನಿಖಿಲ್ (31), ಎಂ. ರಾಹುಲ್ (20೦), ಪಿ. ಅಖಿಲ್ (2೦), ಕೆ.ವಿ. ಮಧು (32), ಇ. ಶರತ್ (31), ಸಿ.ಕೆ. ಸನೀಶ್ (ಕುಟ್ಟಾಪಿ) (4೦), ಎಂ.ಕೆ. ನಿಪಿನ್ (2೦) ಮತ್ತು ಪಿ.ವಿ ವತ್ಸರಾಜ್ (4೦) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ.







