ಸಚಿವರ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಿ ಪ್ರತಿಭಟನೆ: ಎಸ್‌ಟಿ ಪ್ರಮೋಟರ್ ಕೆಲಸದಿಂದ ವಜಾ

ಕಾಸರಗೋಡು: ಸಚಿವ ಒ.ಜೆ. ಜನೀಶ್ ವಿರುದ್ಧ ಕಪ್ಪು ಪತಾಕೆ ತೋರಿಸಿ ಪ್ರತಿಭಟನೆ ನಡೆಸಿದ ಬೇಡಡ್ಕದ ಎಸ್‌ಟಿ ಪ್ರಮೋಟರ್‌ರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಪಯರ್‌ಪಳ್ಳ ನಿವಾಸಿ ಎಚ್. ರೋಹಿಣಿಯನ್ನು ಸರಕಾರ ವಜಾಗೊಳಿಸಿದೆ. ಕುಟ್ಟಿಕ್ಕೋಲ್ ಪಂಚಾಯತ್‌ನ ಮುಂಭಾಗದಲ್ಲಿ ಇತ್ತೀಚೆಗೆ ಸಚಿವರಿಗೆ ಕಪ್ಪು ಪತಾಕೆ ತೋರಿಸಿ ಪ್ರತಿಭಟಿಸಿದ ಘಟನೆ ನಡೆದಿದೆ. ಕಪ್ಪು ಪತಾಕೆ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಘಟನೆಯಲ್ಲಿ ಟ್ರೈಬಲ್ ಎಕ್ಸ್‌ಟೆನ್ಶನ್ ಆಫೀಸರ್ ಪ್ರಮೋಟರ್‌ರೊಂದಿಗೆ ಸ್ಪಷ್ಟೀಕರಣ ಕೇಳಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿರುವುದಾಗಿ ರೋಹಿಣಿ ಒಪ್ಪಿಕೊಂಡಿದ್ದರು. ಸರಕಾರದ ಗೌರವಧನ ಪಡೆಯುವ ರೋಹಿಣಿಯ ನಡವಳಿಕೆ ಪ್ರಮೋಟರ್ ಎಂಬ ನೆಲೆಯಲ್ಲಿ ಶಿಸ್ತು ಉಲ್ಲಂಘನೆಯಾಗಿದೆ ಎಂದು ಪತ್ತೆಹಚ್ಚಲಾಗಿತ್ತು. ಪರಿಶಿಷ್ಟ ವರ್ಗ ಇಲಾಖೆ ನಿರ್ದೇಶಕರ ಶಿಫಾರಸು ಪ್ರಕಾರ ರೋಹಿಣಿ ಅವರನ್ನು ಕೆಲಸದಿಂದ ವಜಾಗೊಳಿಸಲಿರುವ ಆದೇಶ ಹೊರಡಿಸಲಾಗಿದೆ.

RELATED NEWS

You cannot copy contents of this page