ಕಲ್ಲಿಕೋಟೆ: ರಾಜ್ಯಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆಯಾಗಿರುವ ಡಾ. ಪಿ.ಟಿ. ಉಷಾರ ಪತಿ ಶ್ರೀನಿವಾಸನ್ (64) ನಿಧನ ಹೊಂದಿದರು. ಪಯ್ಯೋಳಿ ತಿಕ್ಕೋಡಿ ಪೆರುಮಾಳ್‌ಪುರಂನ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಮುಂಜಾನೆ 1 ಗಂಟೆ ವೇಳೆ ಘಟನೆ ನಡೆದಿದೆ. ಪಾರ್ಲಿಮೆಂಟ್ ಸಮ್ಮೇಳನ ದಲ್ಲಿ ಭಾಗವಹಿಸಲು ತೆರಳಿದ್ದ ಪಿ.ಟಿ. ಉಷಾ ಊರಿಗೆ ಮರಳಿದ್ದಾರೆ. ಶ್ರೀನಿವಾಸನ್ ಕೇಂದ್ರ ಕೈಗಾರಿಕಾ ಭದ್ರತಾ ಸೇನೆಯ ಡಿವೈಎಸ್‌ಪಿಯಾ ಗಿದ್ದರು. ಮೃತರು ಪತ್ನಿ, ಪುತ್ರ ಡಾ. ಉಜ್ವಲ್ ವಿಘ್ನೇಶ್ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







