ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ (70ನೇ ವಾರ್ಷಿಕ) ಮಹೋತ್ಸವ ದಂಗವಾಗಿ ಅಗೋಸ್ತ್ ೨೮ರಿಂದ ಸೆಪ್ಟಂಬರ್ 9ರ ತನಕ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಕರಂದಕ್ಕಾಡ್ ಶಿವಾಜಿನಗರದ ಶ್ರೀ ವೀರ ಹನುಮಾನ್ ಪ್ರಾದೇಶಿಕಸಮಿತಿಗೆ ರೂಪು ನೀಡಲಾಯಿತು. ಸಪ್ತತಿ ಮಹೋತ್ಸವದಂಗವಾಗಿ ಕರಂದಕ್ಕಾಡ್ ಶಿವಾಜಿ ನಗರವನ್ನು ಕೇಸರಿ ಧ್ವಜಗಳ ಸಹಿತ ತಳಿರು ತೋರಣಗಳು ಮತ್ತು ವಿದ್ಯುದ್ದೀಪಾಲಂಕೃತ ವ್ಯವಸ್ಥೆ ಮಾಡುವುದು, ಅನ್ನದಾನಕ್ಕೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಮನೆಗಳಿಂದ ಸಂಗ್ರಹಿಸಿ ಹಸಿರುವಾಣಿ ಸಮರ್ಪಿಸುವುದು, ಕೊನೆಯ ದಿನದಂದು ಶ್ರೀ ಗಣೇಶ ವಿಗ್ರಹ ವಿಸರ್ಜನಾ ಶೋಭಾಯಾತ್ರೆಗೆ, ಸ್ತಬ್ದಚಿತ್ರ ಅಳವಡಿಸುವಿಕೆ ಇತ್ಯಾದಿ ತೀರ್ಮಾನವನ್ನು ಪ್ರಾದೇಶಿಕ ಸಮಿತಿ ಕೈಗೊಂಡಿದೆ.
