ಮಾದಕಮುಕ್ತ ಸಂದೇಶದ ಸಾಮೂಹಿಕ  ಓಟದೊಂದಿಗೆ ಪುತ್ತಿಗೆ ಪಂ. ಕೇರಳೋತ್ಸವಕ್ಕೆ ಚಾಲನೆ

ಪುತ್ತಿಗೆ: ಕೇರಳ ರಾಜ್ಯೋದಯ ದಿನವಾದ ನಿನ್ನೆ ಮಾದಕಮುಕ್ತ ಸಂದೇಶದೊಂದಿಗೆ  ನಡೆದ  ಸಾಮೂಹಿಕ ಓಟದೊಂದಿಗೆ ಪುತ್ತಿಗೆ ಪಂಚಾಯತ್ ಕೇರಳೋತ್ಸವಕ್ಕೆ ಚಾಲನೆ ನೀಡಲಾಯಿತು.  ಕಟ್ಟತ್ತಡ್ಕದಿಂದ ಮುಹಿಮ್ಮಾತ್ ಶಾಲೆಯ ಮೈದಾನವರೆಗೆ ‘ತೂಫಾನ್ ವಾರಿಯರ್’ ಅಭಿಯಾನದಂಗವಾಗಿ    ಸಾಮೂಹಿಕ ಓಟ ನಡೆಯಿತು. ಕುಂಬಳೆ ಎಸ್.ಐ ವಿಶಾಖ್ ಧ್ವಜ ಹಾರಿಸಿ ಸಾಮೂಹಿಕ ಓಟಕ್ಕೆ ಚಾಲನೆ ನೀಡಿದರು. ಕೇರಳೋತ್ಸವವನ್ನು ಪಂಚಾಯತ್ ಅಧ್ಯಕ್ಷ ಫಿದಾ ಊಜಂಪದವು ಉದ್ಘಾಟಿಸಿದರು.  ಉಪಾಧ್ಯಕ್ಷ ಇ.ಕೆ.ಮುಹಮ್ಮದ್ ಅಧ್ಯಕ್ಷತೆ ವಹಿಸಿದರು. ಎಸ್‌ಐ ವಿಶಾಖ್ ಮುಖ್ಯ ಅತಿಥಿಯಾಗಿದ್ದರು.  ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ಸಕೀನ ಐ.ಎ, ಅನಿತಾ, ಸತೀಶ್ ಎಚ್.ಆರ್., ಜುನೈದ್ ಉರ್ಮಿ, ಬಶೀರ್ ಕೊಟ್ಟುಡಲ್, ಮಿಸ್ರಿಯ, ಪುಷ್ಪಲತಾ, ಎಸ್‌ಐ ಅಬ್ದುಲ್ಲ, ಬಿ.ಎಂ. ಹಮೀದ್, ಲಲಿತಾ, ಮಜೀದ್ ಎಂ.ಎಚ್, ರೂಪ ವಿ. ರೈ, ಲಕ್ಷ್ಮೀ  ಭಟ್, ಕೋ-ಆರ್ಡಿನೇಟರ್ ರಫೀಕ್ ಕುಂಟಾರು, ಮುಹಿಮ್ಮಾತ್ ಶಾಲೆ ಮುಖ್ಯೋಪಾಧ್ಯಾಯ ಸಾದಿಕ್,  ಪಂಚಾಯತ್ ಕಾರ್ಯದರ್ಶಿ ಸುಧೀಶ್ ಉಪಸ್ಥಿತರಿದ್ದರು.  ಕೇರಳೋ ತ್ಸವದಂಗವಾಗಿ ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್, ಕಬಡ್ಡಿ, ಹಗ್ಗಜಗ್ಗಾಟ, ಚೆಸ್ ಹಾಗೂ ವಿವಿಧ ವೇದಿಕೆ ಸ್ಪರ್ಧೆಗಳು ನವಂಬರ್ ೧೫ರ ವರೆಗೆ ನಡೆಯಲಿದೆ.

RELATED NEWS

You cannot copy contents of this page