ವರ್ಕಾಡಿ ಪಂಚಾಯತ್ನಲ್ಲಿ ರೇಬಿಸ್ ಪ್ರತಿರೋಧ ಚುಚ್ಚುಮದ್ದು ಶಿಬಿರ 15ರಿಂದ

ವರ್ಕಾಡಿ: ಪಂಚಾಯತ್, ಸರಕಾರಿ ಮೃಗಾಸ್ಪತ್ರೆ ಇದರ ಆಶ್ರಯದಲ್ಲಿ ರೇಬಿಸ್ ಪ್ರತಿರೋಧ ಚುಚ್ಚುಮದ್ದು ಶಿಬಿರ ಈ ತಿಂಗಳ 15ರಿಂದ 24ರ ತನಕ ವಿವಿಧ ಕಡೆಗಳಲ್ಲಿ ನಡೆಯಲಿದೆ. 15ರಂದು ಬೆಳಿಗ್ಗೆ 9.30ರಿಂದ ಬೋಳಕಡ, 10.30ರಿಂದ ಪಾವೂರು, 11ರಿಂದ ಪಾವೂರುಕೋಡಿ, 11.45ರಿಂದ ಮುಡಿಮಾರ್, 12.30 ರಿಂದ ಎಂಜಿಎಲ್ಸಿ ಕೆದುಂಬಾಡಿ, 1.15ರಿಂದ ಬೋಳದಪದವು, 2ರಿಂದ ಕೆದುಂಬಾಡಿ ಎಬಿಸಿ ಕ್ಲಬ್, 16ರಂದು ಬೆಳಿಗ್ಗೆ 9.30ರಿಂದ ಕಾಪ್ರಿ ಅಂಗನವಾಡಿ, 10.30ರಿಂದ ತೌಡುಗೋಳಿ ಶಾಲೆ, 11.30ರಿಂದ ಬಟ್ಯಡ್ಕ, 12.30ರಿಂದ ಪಾವಳ, 1.30ರಿಂದ ಬಜಿಲಕರೆ, 17ರಂದು ಬೆಳಿಗ್ಗೆ 9.30ರಿಂದ ಸುಳ್ಯಮೆ, 10ರಿಂದ ಸೇನ್ಯ ರೇಶನ್ ಅಂಗಡಿ, 10.30ಕ್ಕೆ ಜೋಗಿಬೆಟ್ಟು, 11 ಗಂಟೆಗೆ ಅಡೆಕಳಕಟ್ಟೆ, 12 ಗಂಟೆಗೆ ಎಂಜಿಎಲ್ಸಿ ಪೊಯ್ಯತ್ತಬೈಲು, 1ರಿಂದ ಕೂಟತ್ತಜೆ ಕ್ಷೇತ್ರ, 18ರಂದು ಬೆಳಿಗ್ಗೆ 9.30ರಿಂದ ಪಾತೂರು ಜಂಕ್ಷನ್, 10ರಿಂದ ಬಾಕ್ರ ಬೈಲು ಜಂಕ್ಷನ್, 11ರಿಂದ ಬೋಳ್ಮಾರ್, 11.30ಕ್ಕೆ ಕೂಡುರಸ್ತೆ, 12 ಗಂಟೆಗೆ ಮಾಣಿಲ, 1ರಿಂದ ಕಲ್ಲಾರ್ಕಟ್ಟೆ, 1.30ಕ್ಕೆ ಮಜಂದೂರ್, 20ರಂದು ಬೆಳಿಗ್ಗೆ 9.30ಕ್ಕೆ ಸೊಡಂಕೂರ್, 10ರಿಂದ ಗುವೆದಪಡ್ಪು, 11ರಿಂದ ಮುಗುಳಿ, 12 ರಿಂದ ನಡಿಬೈಲ್ ಅಂಗನವಾಡಿ, 1ರಿಂದ ಮಲಾರ್, 21ರಂದು ಬೆಳಿಗ್ಗೆ 9.30ರಿಂದ ಬೋರ್ಕಳ, 10ರಿಂದ ಕುಂಟಪದವು, 10.30ರಿಂದ ಸುಣ್ಣಂಗೋಳಿ, 11ರಿಂದ ಕತ್ತೆರಿಕೋಡಿ, 22ರಂದು ಬೆಳಿಗ್ಗೆ 9.30ರಿಂದ ಕೊಡ್ಲಮೊಗರು, 10ರಿಂದ ಬೋಲ್ನ, 10.30ಕ್ಕೆ ಪಜ್ವ, 11ರಿಂದ ಕಣಿಯೂರು, 12ರಿಂದ ಕೋಟೆಮಾರ್, 12.30ಕ್ಕೆ ಬದಿಯಾರ್, 23ರಂದು ಬೆಳಿಗ್ಗೆ 9.30ಕ್ಕೆ ತಿಮ್ಮಂಗೂರು, 10.15ಕ್ಕೆ ಬುಡ್ಡೋಡಿ, 11 ಗಂಟೆಗೆ ಬೇಕಲಿ ಜಂಕ್ಷನ್, 12 ಗಂಟೆಗೆ ಮಂದ್ರಬೈಲು, 12.45ಕ್ಕೆ ಮೊರತ್ತಣೆ, 1.30ಕ್ಕೆ ಅರಿಬೈಲು, 24ರಂದು ಬೆಳಿಗ್ಗೆ 9.30ಕ್ಕೆ ತಚ್ಚಿರೆಪದವು, 10 ಗಂಟೆಗೆ ತಚ್ಚಿರೆ, 10.45ಕ್ಕೆ ವರ್ಕಾಡಿ ಪದವು, 11.30ಕ್ಕೆ ನೆಯ್ಯಮೊಗರು, 12.15ಕ್ಕೆ ಪೊಯ್ಯೆ, 1 ಗಂಟೆಗೆ ನೆಕ್ಕಳ, 1.30ಕ್ಕೆ ಬೋಳಕಡದಲ್ಲಿ ಶಿಬಿರ ಜರಗಲಿದೆ. ವರ್ಕಾಡಿ ಪಂಚಾಯತ್ನ ಎಲ್ಲಾ ಸಾಕುನಾಯಿಗಳಿಗೂ, ಬೆಕ್ಕುಗಳಿಗೂ, ರೇಬಿಸ್ ಪ್ರತಿರೋಧ ಚುಚ್ಚುಮದ್ದು ಈ ಶಿಬಿರಗಳಿಂದ ಲಭಿಸುವುದು. ಮೂರು ತಿಂಗಳಿಗಿ0ತ ಮೇಲ್ಪಟ್ಟ ಎಲ್ಲಾ ನಾಯಿ, ಬೆಕ್ಕುಗಳಿಗೆ 55 ರೂ. ಶುಲ್ಕ ಪಾವತಿಸಿ ಚುಚ್ಚುಮದ್ದು ಪಡೆದುಕೊಳ್ಳಬಹುದೆಂದು ತಿಳಿಸಲಾಗಿದೆ.

You cannot copy contents of this page