ಜೂಜಾಟ ಅಡ್ಡೆಗೆ ದಾಳಿ: ಐದು ಮಂದಿ ಸೆರೆ;  ನಗದು ವಶ

ಕುಂಬಳೆ: ಕುಂಬಳೆ ಕುಂಟಂಗೇ ರಡ್ಕದ ಐಎಚ್‌ಆರ್‌ಡಿ ಕಾಲೇಜು ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಹಣವಿರಿಸಿ ಜೂಜಾಟ ನಡೆಸುತ್ತಿದ್ದ ಕೇಂದ್ರಕ್ಕೆ ಕುಂಬಳೆ ಠಾಣೆ ಎಸ್‌ಐ ಸಂತೋಷ್ ವಿ.ವಿ ನೇತೃತ್ವದ ತಂಡ ನಿನ್ನೆ ದಾಳಿ ನಡೆಸಿ ಜೂಜಾಟದಲ್ಲಿ ನಿರತ ರಾದ ೫ ಮಂದಿಯನ್ನು ಸೆರೆಹಿಡಿದು ಪ್ರಕರಣ ದಾಖಲಿಸಿ,  16,520 ರೂ. ನಗದು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಮುಕ್ಕಾಚೇರಿಯ ಇಂತಿಯಾಸ್ (43), ಕೊಯಿಪ್ಪಾಡಿ ಬದ್ರಿಯಾನಗರದ ಅಬೂಬಕ್ಕರ್ ಸಿದ್ದಿಕ್ (35), ಉಪ್ಪಿನಂಗಡಿ ಕಸಯ ನೌಶಾದ್ ಯು.ಬಿ (40), ಉಪ್ಪಿನಂಗಡಿ ರಾಮ್‌ನಗರದ ಮಂಜುನಾಥ ಶೆಣೈ (45) ಮತ್ತು ಸೋಮೇಶ್ವರದ ಮೊಹಮ್ಮದ್ ಹಾರೀಸ್ (42) ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

You cannot copy contents of this page