ಕಾಸರಗೋಡು: ಚೌಕಿ ಸಿಪಿಸಿಆರ್‌ಐ ಸಮೀಪ ರೈಲ್ವೇ ನೌಕರನೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಿಹಾರದ ಬೋಜ್‌ಪುರ್ ಗೋರ್‌ಪೋಕಾರ್ ನಿವಾಸಿ ಅರವಿಂದ್ ಕುಮಾರ್ (44) ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ರೈಲ್ವೇ ಹಳಿ ಮೈಂಟೆನೆನ್ಸ್ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ 10 ಗಂಟೆ ವೇಳೆ ಘಟನೆ ನಡೆದಿದೆ. ಕಣ್ಣೂರು- ಮಂಗಳೂರು ಪ್ಯಾಸೆಂಜರ್ ರೈಲು ಗಾಡಿ ಇವರಿಗೆ ಢಿಕ್ಕಿ ಹೊಡೆದಿ ರುವುದಾಗಿ ಅಂದಾಜಿಸಲಾಗಿದೆ. ವಿಷಯ ತಿಳಿದು ಕಾಸರಗೋಡು ನಗರ ಠಾಣೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಗಿದೆ.
