ಕುಂಬಳೆ: ರೈಲು ಗಾಡಿಗೆ ಹತ್ತುತ್ತಿದ್ದ ವೇಳೆ ಉಂಟಾದ ದುರ್ಘಟನೆಯಲ್ಲಿ ರೈಲ್ವೇ ನೌಕರನ ಕೈ ತುಂಡರಿಸಲ್ಪಟ್ಟ ದಾರುಣ ಘಟನೆ ಕುಂಬಳೆಯಲ್ಲಿ ಸಂಭವಿಸಿದೆ. ತಮಿಳುನಾಡಿನ ತಿರುನಲ್ವೇಲಿ ನಿವಾಸಿಯಾದ ರಾಜಶೇಖರನ್ (36) ಎಂಬವರ ಬಲದ ಕೈ ತುಂಡರಿಸಲ್ಪಟ್ಟಿದೆ. ನಿನ್ನೆ ಅಪರಾಹ್ನ 2.50ಕ್ಕೆ ಕುಂಬಳೆಗೆ ತಲುಪಿದ ತಿರುವನಂತಪುರ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿಗೆ ಹತ್ತುತ್ತಿದ್ದ ವೇಳೆ ರಾಜಶೇಖರನ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಬಲಕೈ ಪ್ಲಾಟ್ ಫಾರ್ಮ್ ಹಾಗೂ ರೈಲಿನ ಮಧ್ಯೆ ಸಿಲುಕಿಕೊಂಡು ತುಂಡರಿಸಲ್ಪ ಟ್ಟಿದೆ. ಅವರನ್ನು ಕಾಸರಗೋಡು ಜನ ರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.







