ರೈಲ್ವೇ ದರ ಹೆಚ್ಚಳ: ಡಿವೈಎಫ್‌ಐಯಿಂದ ರೈಲು ನಿಲ್ದಾಣಕ್ಕೆ ಮಾರ್ಚ್

ಕಾಸರಗೋಡು: ರೈಲ್ವೇ ಹೆಚ್ಚಿಸಿದ  ದರವನ್ನು ಹಿಂತೆಗೆಯಬೇಕು, ಆಗಾಗ ಪ್ರಯಾಣ ದರವನ್ನು ಹೆಚ್ಚಿಸುವ ರೈಲ್ವೇಯ  ನಿಲುವು ಪ್ರತಿಭಟಿಸಿ  ಡಿವೈಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಡ್ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದರು. ಜ್ಯೋತಿ ಚೆನ್ನಿಕ್ಕರೆ, ರಂಜಿನಿ ಕಾರಡ್ಕ, ಪ್ರವೀಣ್ ಪಾಡಿ, ಇಮ್ಯಾನುವೆಲ್ ಮಾತನಾಡಿದರು. ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯ ಸುಭಾಷ್ ಪಾಡಿ ಸ್ವಾಗತಿಸಿದರು. ತಾಯಲಂಗಾಡಿ ಯಿಂದ ಮೆರವಣಿಗೆ ಆರಂಭಗೊಂಡಿತು.

You cannot copy contents of this page