ತಿರುವನಂತಪುರ: ಮಾಜಿ ವಿಪಕ್ಷ ಮುಖಂಡ, ಕಾಂಗ್ರೆಸ್‌ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲರ ತಾಯಿ ಎನ್. ದೇವಕಿ ಅಮ್ಮ (91) ನಿಧನ ಹೊಂದಿದರು. ತೃಪರುಂದರ ಕೋಟೂರು ನಿವಾಸಿ ದಿ| ವಿ. ರಾಮಕೃಷ್ಣನ್ ನಾಯರ್‌ರ ಪತ್ನಿಯಾಗಿದ್ದಾರೆ. ಮೃತರು ಇತರ ಮಕ್ಕಳಾದ ಕೆ.ಆರ್. ರಾಜನ್, ಕೆ.ಆರ್. ವಿಜಯಲಕ್ಷ್ಮಿ, ಕೆ.ಆರ್. ಪ್ರಸಾದ್, ಸೊಸೆಯಂದಿರಾದ ಅನಿತಾ ರಮೇಶ್, ಅಂಬಿಳಿ ಎಸ್. ಪ್ರಸಾದ್, ಶ್ರೀಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಸಿ.ಕೆ. ರಾಧಾಕೃಷ್ಣನ್ ಈ ಹಿಂದೆ ನಿಧನ ಹೊಂದಿದ್ದಾರೆ.
