ಕಾಸರಗೋಡು: ಹೃದಯದ ವಾಲ್ವ್‌ಗೆ ಉಂಟಾದ ಹಾನಿ ಸಹಿತ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 80ರ ಹರೆಯದ ವ್ಯಕ್ತಿಗೆ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿಕ್ ಅಡ್ರಿನಲಾಕ್ಟಮಿ (ಹೊಟ್ಟೆಯನ್ನು ತೆರೆಯದೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಅಡ್ರಿನಲ್ ಗ್ರಂಥಿ ಹಾಗೂ ಟ್ಯೂಮರ್ ತೆರವುಗೊಳಿಸುವಿಕೆ) ಯಶಸ್ವಿಯಾಗಿ ನಡೆಸಲಾಯಿತು. ಈ ಅತೀ ಸಾಹಸಕರ ಶಸ್ತ್ರಚಿಕಿತ್ಸೆ ಮೂಲಕ ಕಾಸರಗೋಡು ಆರೋಗ್ಯ ರಂಗದಲ್ಲಿ ವೈದ್ಯರ ಸಾಧನೆ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಸಾಬೀತುಗೊಂ ಡಿದೆ. ರೋಗಿಯ ಕಿಡ್ನಿಯ ಮೇಲ್ಭಾಗದಲ್ಲಿರುವ 12 ಸೆಂಟಿಮೀಟರ್ ವ್ಯಾಪ್ತಿಯ ಹ್ಯೂಮರ್ ತೆರವುಗೊಳಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರೋಗಿಯ ಪ್ರಾಯ, ಹೃದಯ ವಾಲ್ವ್ ಬದಲಾಯಿಸುವುದ ರೊಂದಿಗೆ ಗಂಭೀರ ಹೃದಯದ ಸ್ಥಿತಿಯನ್ನು ಪರಿಗಣಿಸಿ ಅತ್ಯಂತ ಅಪಾಯಕಾರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ವೈದ್ಯರು ನಡೆಸಿದ್ದಾರೆ. ಸರ್ಜಿಕಲ್ ಓಂಕಾಲಜಿ, ಮೆಡಿಕಲ್ ಓಂಕಾಲಜಿ, ಯುರೋಲಜಿ, ಅನಸ್ತೇಶಿಯಾ, ಕಾರ್ಡಿಯೋಲಜಿ, ಕ್ರಿಟಿಕಲ್ ಕೇರ್ ವಿಭಾಗಗಳ ತಜ್ಞ ವೈದ್ಯರ ಪ್ರಯತ್ನದ ಮೂಲಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು. ಗಂಭೀರವಾದ ಈ ಶಸ್ತ್ರಚಿಕಿತ್ಸೆಯಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರನ್ನೊಳಗೊಂಡ ತಂಡ ಪಾಲ್ಗೊಂಡಿದೆ.
ಶಸ್ತ್ರಕ್ರಿಯೆ ಯಶಸ್ವಿಯಾಗಿರುವುದರ ಪ್ರಧಾನ ಹೊಣೆಗಾರಿಕೆ ಯನ್ನು ಸರ್ಜಿಕಲ್ ಓಂಕಾಲಜಿ ವಿಭಾಗದ ಡಾ| ಅರವಿಂದ್, ಮೆಡಿಕಲ್, ಹೆಮೆಟೋ ಓಂಕಾಲಜಿ ವಿಭಾಗದ ಡಾ| ರಾಂನಾಥ್ ಶೆಣೈ ವಹಿಸಿದ್ದರು. ಅತೀವ ಗಮನಹರಿಸಬೇಕಾದ ಅನಸ್ತೇಶಿಯಾ ವಿಭಾಗಕ್ಕೆ ಡಾ| ಮೊಹಮ್ಮದ್ ಅಮೀನ್ (ವಿಭಾಗದ ಮುಖ್ಯಸ್ಥ), ಡಾ| ಶಿವತೇಜ್ ಎಂಬಿವರು ನೇತೃತ್ವ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕದ ಪರಿಚರಣೆಯನ್ನು ಖಾತರಿಪಡಿಸಿ ಚೀಫ್ ಆಪರೇಟಿಂಗ್ ಆಫೀಸರ್ ಡಾ| ಸೋಯ್ ಜೋಸೆಫ್, ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥನೂ ಸಿಎಂಎಸ್ ಆಗಿರುವ ಡಾ| ಸಾಜಿದ್ ಸಲಾಲುದ್ದೀನ್ ಶಸ್ತ್ರಚಿಕಿತ್ಸೆಯ ಮೇಲ್ನೋಟ ವಹಿಸಿದ್ದರು. ಇಂತಹ ಗಂಭೀರ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಪ್ರಾಯದ ವ್ಯಕ್ತಿಗೆ ಅತಿ ಸುರಕ್ಷತೆಯಿಂದ ನಡೆಸಲು ಸಾಧ್ಯವಾಗುವುದರೊಂದಿಗೆ ಆಸ್ಪತ್ರೆಯ ವೈದ್ಯರ ಸಾಧನೆ ಸಾಬೀತುಗೊಂಡಿದೆಯೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಇಂತಹ ಹೈ ರಿಸ್ಕ್ ಶಸ್ತ್ರಚಿಕಿತ್ಸೆಗಳಿಗೆ ಕಾಸರಗೋಡು ಜಿಲ್ಲೆಯ ರೋಗಿಗಳು ನೆರೆ ರಾಜ್ಯಗಳಿಗೆ ತೆರಳಬೇಕಾದ ಸ್ಥಿತಿ ಉಂಟಾಗಿತ್ತು. ಆಸ್ಟರ್ ಮಿಮ್ಸ್ ಕಾಸರಗೋಡಿನಲ್ಲಿ ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಸೌಕರ್ಯಗಳು ಹಾಗೂ ತಜ್ಞ ವೈದ್ಯರ ಸೇವೆ ಈಗ ಜಿಲ್ಲೆಯ ಆರೋಗ್ಯ ರಂಗದಲ್ಲಿ ಪ್ರತ್ಯೇಕವಾಗಿ ಸಾಧನೆಗೆ ಸಾಧ್ಯ ವಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ರೋಗಿ ಆರೋಗ್ಯವಂತನಾಗಿ ರುವುದಾಗಿಯೂ ವೈದ್ಯರು ತಿಳಿಸಿದ್ದಾರೆ.







