ಕಾಸರಗೋಡು: ರೇಶನ್ ವ್ಯಾಪಾರಿ ಗಳೊಂದಿಗೆ ಸರಕಾರ ತೋರಿಸುವ ಅವಗಣನೆ ನೀತಿಯನ್ನು ಕೊನೆಗೊಳಿಸ ಬೇಕೆಂದು ಒತ್ತಾಯಿಸಿ ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿ ಯೇಶನ್ (ಎಕೆಆರ್‌ಆರ್‌ಡಿಎ) ಕಾಸರ ಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ಸಪ್ಲೈ ಆಫೀಸ್‌ಗೆ ರೇಶನ್ ವ್ಯಾಪಾರಿಗಳು ಮಾರ್ಚ್ ಹಾಗೂ ಧರಣಿ ನಡೆಸಿದರು. 2018ರಲ್ಲಿ ಜ್ಯಾರಿಗೆ ಬಂದ ವೇತನ ಪ್ಯಾಕೇಜ್ ಪರಿಷ್ಕರಿ ಸಬೇಕು, ಕೆಟಿಪಿಡಿಎಸ್ ಲೋಪದೋ ಷಗಳನ್ನು ಪರಿಹರಿಸಬೇಕು, ಸೀಮೆಎಣ್ಣೆ ನ್ಯಾಯಾಲಯದ ಆದೇಶ ಪ್ರಕಾರ ವಿತರಣೆ ಮಾಡಬೇಕು, ರೇಶನ್ ಕ್ಷೇಮನಿಧಿ ಮೊತ್ತವನ್ನು ಸರಕಾರ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ರೇಶನ್ ವ್ಯಾಪಾರಿಗಳು ಸಪ್ಲೈ ಕಚೇರಿ ಮುಂದೆ ಧರಣಿ ನಡೆಸಿದರು. ನಗರಸಭಾ ಚೆಯರ್‌ಮೆನ್ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಎಕೆಆರ್‌ಆರ್‌ಡಿಎ ಕಾಸರಗೋಡು ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಶಂಕರ ಬೆಳ್ಳಿಗೆ, ಜಿಲ್ಲಾ ಉಪಾಧ್ಯಕ್ಷ ವಿಜಯನ್ ನಾಯರ್, ಜಿಲ್ಲಾ ಕೋಶಾಧಿಕಾರಿ ಲೋಹಿತಾಕ್ಷನ್ ನಾಯರ್, ಜಿಲ್ಲಾ ಕಾರ್ಯದರ್ಶಿ ಸಿ.ಕೆ. ಅಬ್ದುಲ್ ಖಾದರ್, ಪಿ.ಎ. ಅಬ್ದುಲ್ ಗಫೂರ್ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಪ್ರದೀಪ್ ಮಾಡಕ್ಕಲ್ ಸ್ವಾಗತಿಸಿ, ಉಪಾಧ್ಯಕ್ಷ ವಸಂತ ಶೆಣೈ ವಂದಿಸಿದರು.







