ಕುಂಬಳೆ: ಫುಟ್ಬಾಲ್ ಆಟದ ಮಧ್ಯೆ ರೆಫರಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉಳುವಾರು ಬದ್ರಿಯ ಮಂಜಿಲ್‌ನ ಅಬ್ದುಲ್ಲ-ಖದೀಜ ದಂಪತಿಯ ಪುತ್ರ ಹಸನ್ ಉಳುವಾರು (46) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 6 ಗಂಟೆ ವೇಳೆ ಫುಟ್ಬಾಲ್ ಆಟದ ಮಧ್ಯೆ ಕುಸಿದು ಬಿದ್ದ ಇವರನ್ನು ಕೂಡಲೇ ಕುಂಬಳೆಯ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಮುಸ್ಲಿಂ ಲೀಗ್ ಹಾಗೂ ಸಮಸ್ತದ ಸಕ್ರಿಯ ಕಾರ್ಯಕರ್ತನಾಗಿದ್ದರು.
ಮೃತರು ಪತ್ನಿ ಸಮೀರ, ಪುತ್ರಿ ಖದೀಜ ಅನ್ಫಾ, ಸಹೋದರ-ಸಹೋ ದರಿಯರಾದ ಹುಸೈನ್, ಮುಹಮ್ಮದ್, ಸವಾದ್, ಸುಹರ, ಸುಬೈದ, ಅಸ್ಮ, ಸುಮಯ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






