ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇಗುಲದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ಧಾರ್ಮಿಕ ಸಭೆ

ಬಂದ್ಯೋಡು : ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ನವೆಂಬರ್ 21ರ ತನಕ ವಿಶೇಷ ಕಾರ್ತಿಕ ದೀಪೋತ್ಸವ ಜರಗಲಿದ್ದು, ಇದರ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಸಭೆ ಜರಗಿತು. ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಕ್ಷೇತ್ರದ ಪುರೋಹಿತ ವೇದಮೂರ್ತಿ ಗಣೇಶ ನಾವಡರು ಉಪಸ್ಥಿತರಿದ್ದರು. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಾರಾಯಣ ಹೆಗ್ಡೆ ಕೋಡಿಬೈಲ್, ಸಿ.ಎಸ್ ಕೃಷ್ಣಪ್ಪ ಐಲ, ಈಶ್ವರ ಐಲ, ದಾಮೋದರ ಮಯ್ಯ, ಚಿದಾನಂದ ಮಯ್ಯ, ಶಾಲಿನಿ ಉದಯ್ ಕುಮಾರ್, ಲಲಿತ ಜಗನ್ನಾಥ ಶೆಟ್ಟಿ ಭಾಗವಹಿಸಿದರು. ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಸ್ವಾಗತಿಸಿ, ರುಚಿತ್ ಪೂಜಾರಿ ಕಂಗ್ಲೆ ವಂದಿಸಿದರು. ಬಬಿತಾ ಕೃಷ್ಣಮಯ್ಯ ಪ್ರಾರ್ಥನೆ ಹಾಡಿ ನಿರೂಪಿಸಿದರು. ಸಾಯಂಕಾಲ ತಾಡ ಶ್ರೀ ಮಹಾವಿಷ್ಣು ಮೂರ್ತಿ ಭಜನಾ ಸಂಘ ಇವರಿಂದ ಭಜನಾ ಸಂಕೀರ್ತನೆ. ವಿಷ್ಣು ಸಹಸ್ರನಾಮ ಪಠಣ, ಶ್ರೀ ದೇವರಿಗೆ ದೀಪೋತ್ಸವ , ಅನ್ನಸಂತರ್ಪಣೆ ನೆರವೇರಿತು.

RELATED NEWS

You cannot copy contents of this page