ಉಪ್ಪಳ: ಪ್ರತಾಪನಗರ ಗೌರಿ ಗಣೇಶ ಮಂದಿರದಲ್ಲಿ ಗಣೇಶೋ ತ್ಸವದ ಗೌರಿತದಿಗೆಯ ದಿನದಂದು ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಜಿಲ್ಲಾ ಸಹ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಧಾರ್ಮಿಕ ಭಾಷಣ ಮಾಡಿದರು. ಗಣೇಶ ಮಂದಿರದ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮೋಹನ್ ಶೆಟ್ಟಿ ತೂಮಿನಾಡು, ಶಿವರಾಮ ಪಕಳ, ಜಗದೀಶ್ ಬೊಳ್ಳಂ ದರು, ಡಾಕ್ಟರ್ ಮನುಭಟ್, ವಿಜಯ ಪಂಡಿತ್, ಧರ್ಮ ಸಂದೇಶ ಯಾತ್ರೆಯ ಸಾಧು ವಿನೋದ್ ಸ್ವಾಮೀಜಿ ಶುಭಾಶಂಸನೆ ಗೈದರು. ನಿತೀಶ್ ಪ್ರತಾಪನಗರ ಸ್ವಾಗತಿಸಿ, ಯಜ್ಞೇಶ್ ಪ್ರತಾಪನಗರ ವಂದಿಸಿದರು. ಪ್ರವೀಣ ಪ್ರತಾಪನಗರ ವರದಿ ವಾಚಿಸಿದರು, ಗಿರಿರಾಜ್ ನಿರೂಪಿಸಿದರು. ನಂತರ ಬಂಟ್ವಾಳದ ಬಂಗಾರ್ ತಂಡದಿAದ ಹಾಸ್ಯ ಕಾರ್ಯಕ್ರಮ ಜರಗಿತು.
