ಬದಿಯಡ್ಕ: ಕಲೆ, ಸಂಸ್ಕೃತಿಗಳು ಈ ಮಣ್ಣಿನ ಸತ್ತ÷್ವದ ಸಂಕೇತಗಳು. ಅದನ್ನು ಕರಗತಮಾಡಿಕೊಳ್ಳುವುದು ಜೀವಮಾನ ಸಾಧನೆಯಾಗಿದ್ದು, ಅದರಲ್ಲೂ ವಿಶ್ವ ದಾಖಲೆ ನಿರ್ಮಿಸುವುದು ಅತ್ಯಪೂರ್ವ. ದೇವರ ಅನುಗ್ರಹ, ಸಂಕಲ್ಪ ಶಕ್ತಿಗಳಿಂದ ವ್ಯಕ್ತಿ ಶಕ್ತಿಯಾಗುವುದೇ ಬದುಕಿನ ಸಾರ್ಥಕತೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.
ಶ್ರೀಮಠದಲ್ಲಿ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನಡೆಯುತ್ತಿರುವ ಸಾಂ ಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯದಲ್ಲಿ ಸಾಧನೆಗೈದ ಮಂಗಳೂರಿನ ರೆಮೋನಾ ಇವೆಟ್ಟ್ ಪೆರೇರಾ ಅವರನ್ನು ಅಭಿನಂದಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿ ತರಿದ್ದ ಕರ್ನಾಟಕದ ಮಾಜಿ ವಿಧಾನ ಪರಿಷತ್ತು ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಜೀವನದಲ್ಲಿ ಎತ್ತರಕ್ಕೇರಬೇಕೆಂದಾದರೆ ಅಂತರ್ಮು ಖಿಯಾಗಬೇಕು. ನಮ್ಮ ಸಾಮರ್ಥ್ಯವನ್ನು ಹೊರತರುವುದೇ ಜೀವನದ ಗುರಿಯಾದಾಗ ಬದುಕು ಸಾರ್ಥಕವಾಗುತ್ತದೆ. ರೆಮೋನಾ ಅವರ ಸಾಧನೆ ಇಂತಹ ಗುರಿಯಿಂದ ಒದಗಿರುವಂತದ್ದು. ಇದು ನಮಗೆಲ್ಲ ಮಾದರಿಯಾಗಲಿ ಎಂದು ತಿಳಿಸಿದರು.
ಶಾಂತಿ, ನೆಮ್ಮದಿ, ಸಮಾ ಧಾನಗಳು ಸ್ಮಾರ್ಟ್ ಪೋನೊಳಗಲ್ಲ, ಅದು ನಮ್ಮೊಳಗೆ ಹಲವು ತುಡಿತಗಳ ಸಾಮರ್ಥ್ಯಗಳಲ್ಲಿ ಅಡಗಿದೆ. ನಮ್ಮ ಅನಿಸಿಕೆ, ಬೇಡಿಕೆಗಳಿಗಾಗಿ ಮಕ್ಕಳನ್ನು ಬೆಳೆಸುವುದು ಬೇಡ. ಅವರ ಆಸಕ್ತಿ, ಶಕ್ತಿಗಳನ್ನು ತಿಳಿದು ಬೆಳೆಸಿದಲ್ಲಿ ಸತ್ಪçಜೆಗಳನ್ನು ನಿರ್ಮಿಸಲು ಸಾಧ್ಯ ಎಂದವರು ತಿಳಿಸಿದರು.
ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ, ಪುತ್ತೂರಿನ ಶ್ರೀವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆಗೈದ ರೆಮೋನಾ ಇವೆಟ್ಟ್ ಪೆರೇರಾ ಅವರನ್ನು ಚಾತುರ್ಮಾಸ್ಯ ಸಾಧನಾ ಪುರಸ್ಕಾರ ನೀಡಿ ಸ್ವಾಮೀಜಿ ಅಭಿನಂದಿಸಿ ಆಶೀರ್ವದಿಸಿದರು.
ಚಾತುರ್ಮಾಸ್ಯ ಸಮಿತಿ ಜೊತೆ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಕಾರ್ಯದರ್ಶಿ ಸೂರ್ಯ ನಾರಾಯಣ ಭಟ್ ಎಡನೀರು ನಿರೂಪಿಸಿ, ವಂದಿಸಿದರು. ಬಳಿಕ ವೈಷ್ಣವೀ ನಾಟ್ಯಾಲಯದ ಆಶ್ರಯದಲ್ಲಿ ಶ್ರೀರಾಮ ಪುನರಾಗಮನ ನೃತ್ಯ ರೂಪಕ ಹಾಗೂ ನೃತ್ಯಾರ್ಪಣಂ ಶಾಸ್ತಿçÃಯ ನೃತ್ಯ ಕಾರ್ಯಕ್ರಮ ನಡೆಯಿತು. ಡಾ.ರಾಜೇಶ್ ಬೆಜ್ಜಂಗಳ ಅವರ ಸಾಹಿತ್ಯಕ್ಕೆ ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರಾಗ ಸಂಯೋಜಿಸಿದ ನೃತ್ಯ ರೂಪಕದಲ್ಲಿ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್ ಹಾಗೂ ವಸಂತಕುಮಾರ್ ಗೋಸಾಡ ಹಾಡುಗಾರಿಕೆಯಲ್ಲಿ, ವಿದ್ವಾನ್ ಗೀತೇಶ್ ಕುಮಾರ್ ನೀಲೇಶ್ವರ ಮೃದಂಗ, ವಿದ್ವಾನ್ ರಾಜಗೋಪಾಲ ಕಾಞಂಗಾಡ್ ಕೊಳಲಲ್ಲಿ ಸಹಕರಿಸಿದರು.
