ಕಾಸರಗೋಡು: 110 ಕೆ.ವಿ. ಮೈಲಾಟಿ- ವಿದ್ಯಾನಗರ ಫೀಡರ್‌ನ ಸಾಮರ್ಥ್ಯ ಹೆಚ್ಚಿಸುವುದರಂಗ ವಾಗಿರುವ ಕಾಮಗಾರಿಗಳು ನಡೆಯುವ ಹಿನ್ನೆಲೆಯಲ್ಲಿ ಇಂದಿನಿಂದ ನ.7ರವರೆಗಿನ ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ 110 ಕೆ.ವಿ. ಸಬ್‌ಸ್ಟೇಶನ್‌ಗಳಲ್ಲಿ ವಿದ್ಯುತ್ ವಿತರಣೆ ಆಂಶಿಕವಾಗಿ ಮೊಟಕುಗೊಳ್ಳಲು ಸಾಧ್ಯತೆ ಇದೆ. ಸಬ್ ಸ್ಟೇಶನ್‌ಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ, 33ಕೆ.ವಿ. ಸ್ಟೇಶನ್‌ಗಳಾದ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಎಂಬೆಡೆಗಳಿಂದಿರುವ ವಿದ್ಯುತ್ ವಿತರಣೆಯಲ್ಲಿ ತಡೆ ಉಂಟಾಗಲಿದೆ ಎಂದು ಮೈಲಾಟಿ ಲೈನ್ ಮೈಂಟನೆನ್ಸ್ ಸಬ್ ಡಿವಿಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

 
								 
															





