ಬಾವಿಗೆ ಬಿದ್ದ ಕುಬ್ಜ ತಳಿಯ ದನದ ರಕ್ಷಣೆ

ಪೆರ್ಲ: ಬಾವಿಗೆ ಬಿದ್ದ ಕುಬ್ಜ ತಳಿಗೆ ಸೇರಿದ ದನವನ್ನು ಅಗ್ನಿಶಾಮಕ ದಳದವರು ಮೇಲ ಕ್ಕೆತ್ತಿ ರಕ್ಷಿಸಿದ ಘಟನೆ ಕಾಟುಕುಕ್ಕೆ ಬಳಿ ನಿನ್ನೆ ನಡೆದಿದೆ. ಕಾಟುಕುಕ್ಕೆ ಕಾಂತಾರಿ ಎಂಬಲ್ಲಿನ 31 ಅಡಿ ಆಳದ ಹಾಗೂ ಸುಮಾರು 20 ಅಡಿ ನೀರು ತುಂಬಿದ ಕಟ್ಟೆಯಿಲ್ಲದ ಉಪಯೋ ಗಶೂನ್ಯ ಬಾವಿಗೆ ನಿನ್ನೆ ಬೆಳಿಗ್ಗೆ 10 ಗಂಟೆಗೆ ಈ ದನ ಬಿದ್ದಿದೆ. ತಕ್ಷಣ ಊರವರು ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕ ದಳದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂಂ ಆಫೀಸರ್ ವಿ.ಎನ್. ವೇಣುಗೋಪಾಲ್‌ರ ನೇತೃತ್ವದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಜೆ.ಎಸ್. ಅಊಯ್‌ಸೇನ್ ನೆಟ್‌ನ ಸಹಾಯದೊಂದಿಗೆ ಬಾವಿಗಿಳಿದು ಅಗ್ನಿಶಾಮಕ ದಳದ ಇತರ ಸಿಬ್ಬಂದಿಗಳಾದ ಜೆ.ಬಿ. ಜಿಜು, ಅತುಲ್ ರವಿ, ಒ.ಕೆ. ಅನುಶ್ರೀ, ಹೋಮ್‌ಗಾರ್ಡ್ ಪಿ. ಶ್ರೀಜಿತ್ ಸೇರಿ ದನವನ್ನು ಬಾವಿಯಿಂದ ಮೇಲಕ್ಕೆತ್ತಿ ಪ್ರಾಣ ರಕ್ಷಿಸಿದ್ದಾರೆ.

You cannot copy contents of this page