ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ನ ಮೀಸಲಾತಿ ಡಿವಿಶನ್‌ಗಳನ್ನು ನಿರ್ಣಯಿಸಲಾಗಿದೆ.
ಇದರಂತೆ ಜಿಲ್ಲಾ ಪಂಚಾಯತನ ಮೂರನೇ ಡಿವಿಶನ್ ಆಗಿರುವ ಬದಿಯಡ್ಕವನ್ನು ಪರಿಶಿಷ್ಟ ಜಾತಿ ಮೀಸಲಾತಿ ಡಿವಿಶನ್ ಆಗಿ ಆರಿಸಲಾಗಿದೆ. ಇದರ ಹೊರತಾಗಿ ಎಂಟನೇ ಡಿವಿಶನ್ ಆಗಿರುವ ಕಯ್ಯೂರನ್ನು ಪರಿಶಿಷ್ಟ ಪಂಗಡದ ಮಹಿಳೆಯ ರಿಗಾಗಿ ಮೀಸಲಿರಿಸಲಾಗಿದೆ. ಉಳಿದಂತೆ ದೇಲಂಪಾಡಿ (ಡಿವಿಶನ್ 4), ಕಳ್ಳಾರು (6), ಚಿತ್ತಾರಿಕ್ಕಲ್ (7), ಪೆರಿಯ (12), ಬೇಕಲ (13), ಉದುಮ (14), ಚೆಂಗಳ (15) ಮತ್ತು ಮಂಜೇಶ್ವರ (18)ವನ್ನು ಮಹಿಳಾ ಡಿವಿಶನ್‌ಗಳನ್ನಾಗಿ ನಿರ್ಣಯಿಸಲಾಗಿದೆ.
ಕಲೆಕ್ಟರೇಟ್‌ನ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಡ್ರಾ ಎತ್ತುವ ಮೂಲಕ ಈ ಮೀಸಲಾತಿ ಡಿವಿಶನ್‌ಗಳನ್ನು ಆರಿಸಲಾಯಿತು. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನೇತೃತ್ವ ನೀಡಿದರು.
ಸ್ಥಳೀಯಾಡಳಿತ ಇಲಾಖೆಯ ಉಪ ನಿರ್ದೇಶಕ ಕೆ.ವಿ. ಹರಿದಾಸ್, ತಹಶೀಲ್ದಾರ್‌ಗಳಾದ ಎನ್.ಕೆ. ಸುಬೈರ್, ಕೆ.ವಿ. ಬಿಜು, ಟಿ.ವಿ. ಸಜೀವನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತ್‌ನ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದರು.