ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ನಡೆದ ವಾರ್ಡ್ ಮೀಸಲಾತಿ ಕ್ರಮದಂತೆ ಕಾಸರಗೋಡು ನಗರಸಭೆಯ ವಾರ್ಡ್ಗಳ ಮೀಸಲಾತಿ ನಿರ್ಣಯ ಕ್ರಮವೂ ಪೂರ್ಣಗೊಂಡಿದೆ.
ಕಾಸರಗೋಡು ನಗರಸಭೆಯ ಚಾಲಕುನ್ನು (ವಾರ್ಡ್ ನಂಬ್ರ 15) ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್ ಆಗಿ ಆರಿಸಲಾಗಿದೆ. ಉಳಿದಂತೆ ಚೇರಂಗೈ ವೆಸ್ಟ್ (1), ಚೆರಂಗೈ ಈಸ್ಟ್ (2), ಕೋಟೆಕಣಿ (7), ನುಳ್ಳಿಪ್ಪಾಡಿ ನೋರ್ತ್ (8), ಅಣಂಗೂರು (10), ವಿದ್ಯಾನಗರ ನೋರ್ತ್ (11), ವಿದ್ಯಾನಗರ ಸೌತ್ (12), ಚಾಲ (14), ತುರ್ತಿ (16), ಕೊಲ್ಲಂಪಾಡಿ (17), ಪಚ್ಚಕ್ಕಾಡ್ (18), ಹೊನ್ನೆಮೂಲೆ (24), ತಳಂಗರ ಬಾಂಗೋಡು (25), ಖಾಸೀ ಲೇನ್ (26), ತಳಂಗರೆ ಕಂಡತ್ತಿಲ್ (29), ತಳಂಗರೆ ದೀನಾರ್ನಗರ (31), ತಾಯ ಲಂಗಾಡಿ (32), ನೆಲ್ಲಿಕುಂಜೆ (35), ಕಡಪುರಂ ಸೌತ್ (37) ಮತ್ತು ಕಣಿಪುರ ನೋರ್ತ್ (38) ಎಂಬಿವುಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಆರಿಸಲಾಗಿದೆ. ಇದರ ಜತೆಗೆ ಹೊಸದುರ್ಗ ಮತ್ತು ನೀಲೇಶ್ವರ ನಗರಸಭಗಳ ಮೀಸಲಾತಿ ವಾರ್ಡ್ಗಳನ್ನು ಆರಿಸಲಾಗಿದೆ.







