ಕಾಸರಗೋಡು: ಉಸಿರಾಟ ತೊಂದರೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೂರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ಮಜಲ್‌ನ ಜಗದಾಂಬ ನಿಲಯದ ಗಲ್ಫ್ ಉದ್ಯೋಗಿ ಪ್ರಶಾಂತ್ ಕುಮಾರ್-ಮಾಳವಿಕ ದಂಪತಿ ಪುತ್ರ ಅಶ್ವಿಕ್ ಪಿ. ಸಾವನ್ನಪ್ಪಿದ ಬಾಲಕ. ಉಸಿರಾಟ ತೊಂದರೆಗೊಳಗಾದ ಬಾಲಕನನ್ನು ಈ ತಿಂಗಳ 17ರಂದು ವಿದ್ಯಾನಗರದ ಆಸ್ಪತ್ರೆಯೊಂದರಲ್ಲಿ ಮೊದಲು ಚಿಕಿತ್ಸೆ ನೀಡಲಾಗಿತ್ತು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿ ಚಿಕಿತ್ಸೆ ನೀಡಿ ಬಳಿಕ ಅಲ್ಲಿಂದ ಬಿಡುಗಡೆ ಗೊಳಿಸಲಾಗಿತ್ತು. ಮೊನ್ನೆ ರಾತ್ರಿ ಬಾಲಕನಿಗೆ ಮತ್ತೆ ಉಸಿರಾಟ ತೊಂದರೆ ಅನುಭವಗೊಂಡಾಗ ಆತನನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿ ಯಾಗದೆ ನಿಧನ ಹೊಂದಿನು. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ಮೃತದೇಹವನ್ನು ನಿನ್ನೆ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಮೃತ ಬಾಲಕ ಹೆತ್ತವರ ಹೊರತಾಗಿ ಸಹೋದರಿ ಅನ್ಶಿಕಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಬಾಲಕನ ನಿಧನ ನಾಡನ್ನೇ ಶೋಕಸಾಗದಲ್ಲಿ ಮುಳುಗುವಂತೆ ಮಾಡಿದೆ.







