ಪ್ಲಾಸ್ಟಿಕ್ ನಿಷೇಧ ಜ್ಯಾರಿಗೊಳಿಸುವ ಹೊಣೆಗಾರಿಕೆ ರಾಜ್ಯ ಸರಕಾರಕ್ಕೂ ಇದೆ- ಹೈಕೋರ್ಟ್

ಕೊಚ್ಚಿ: ಏಕಬಾರಿ ಉಪಯೋಗಿಸುವ ಪ್ಲಾಸ್ಟಿಕ್  ಸಾಮಗ್ರಿಗಳ ಮೇಲೆ ಹೇರಲಾಗಿರುವ ನಿಷೇಧವನ್ನು ಜ್ಯಾರಿಗೊಳಿಸುವ ಹೊಣೆಗಾರಿಕೆ ರಾಜ್ಯ ಸರಕಾರವೂ ಹೊಂದಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಏಕಬಾರಿ ಉಪಯೋಗದ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆಯ ಮೇಲೆ 2019 ನವೆಂಬರ್ 27ರಂದು ರಾಜ್ಯ ಸರಕಾರ ನಿಷೇಧ ಹೇರಿ ಆದೇಶ ಜ್ಯಾರಿಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ವಿಜು ಎಬ್ರಹಾಂ ವಜಾಗೈದಿದ್ದಾರೆ.

ಇನ್ನೊಂದೆಡೆ ಸರಕಾರ ಹೊರಡಿಸಿದ ಆದೇಶವನ್ನು ಜ್ಯಾರಿಗೊಳಿಸುವಂತೆ ಆಗ್ರಹಿಸಿ ಹಲವು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಇದನ್ನೆಲ್ಲಾ ಪರಿಶೀಲಿಸಿದ ನ್ಯಾಯಾಲಯ ಏಕಬಾರಿ ಪ್ಲಾಸ್ಟಿಕ್ ಸಾಮಗ್ರಿಗಳ ಮೇಲೆ ರಾಜ್ಯ ಮತ್ತು ಕೇಂದ್ರ ಸರಕಾರ ಹೇರಿರುವ ನಿಷೇಧವನ್ನು ಜ್ಯಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೊಣೆಗಾರಿಕೆ ಇದೆ ಎಂದು  ಹೇಳಿದೆ.

RELATED NEWS

You cannot copy contents of this page