ಉಪ್ಪಳ: ಉಪ್ಪಳ ಚೆಕ್‌ಪೋಸ್ಟ್ ಬಳಿಯಿರುವ ರೆಸ್ಟೋರೆಂಟ್‌ಗೆ ಬೆಂಕಿ ತಗಲಿದ ಘಟನೆ ನಡೆದಿದೆ. ಇಲ್ಲಿನ ಕುಳಿಮಂದಿ ಎಂಬ ರೆಸ್ಟೋರೆಂಟ್‌ಗೆ ನಿನ್ನೆ ಬೆಳಿಗ್ಗೆ 11.30ರ ವೇಳೆ ಬೆಂಕಿ ತಗಲಿದೆ. ಘಟನೆ ವೇಳೆ ಇಬ್ಬರು ನೌಕರರು ಮಾತ್ರವೇ ರೆಸ್ಟೋರೆಂಟ್‌ನೊಳಗಿದ್ದರು. ಇವರು ಅಪಾಯದಿಂದ ಪಾರಾಗಿದ್ದಾರೆ. ರೆಸ್ಟೋರೆಂಟ್‌ನ ಎದುರು ಭಾಗದಿಂದ ಬೆಂಕಿ ಹತ್ತಿಕೊಂಡಿದೆ. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಫ್ಯಾನ್, ಫ್ರಿಡ್ಜ್ ಸಹಿತ ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡಿದ್ದು, ಇದರಿಂದ ಭಾರೀ ನಷ್ಟ ಸಂಭವಿಸಿದೆ ಎಂದು ರೆಸ್ಟೋರೆಂಟ್ ಮಾಲಕ ವರ್ಕಾಡಿಯ ಇಲ್ಯಾಸ್ ತಿಳಿಸಿದ್ದಾರೆ.
