ಮಂಜೇಶ್ವರ: ಕೇರಳ ಸರಕಾ ರದ ತಿರುವನಂತಪುರ ಸೆಕ್ರೆಟರಿಯೇ ಟ್ನಲ್ಲಿ ಅಡಿಶನಲ್ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕುಂಜತ್ತೂರು ಬಳಿಯ ತೂಮಿನಾಡು ನಿವಾಸಿ ನಾರಾಯಣ ಪೂಜಾರಿ (78) ನಿಧನ ಹೊಂದಿದರು. ಇವರು ಕಳೆದ ಆರು ತಿಂಗಳಿAದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ಕಳೆದ ಒಂದು ವಾರದ ಹಿಂದೆ ರೋಗ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. ಮೃತರು ಪತ್ನಿ ಪ್ರೇಮ, ಮಕ್ಕಳಾದ ನವೀನ್ ಕುಮಾರ್.ವಿ.ಸಿ (ಮಂ ಜೇಶ್ವರ ವಿದ್ಯುತ್ ಕಚೇರಿಯಲ್ಲಿ ಅಸಿ ಸ್ಟೆಂಟ್ ಇಂಜಿನಿಯರ್), ಸವಿತಾ. ವಿ.ಸಿ, ಸೊಸೆ ಚೇತನ, ಸಹೋದರಿ ಸುಂದರಿ ಹಾಗೂ ಅಪಾರ-ಬಂಧು ಬಳಗವನ್ನು ಅಗಲಿದ್ದಾರೆ.
