ಹೊಸದುರ್ಗ: ನಿವೃತ್ತ ನೌಕಾಸೇನೆ ಅಧಿಕಾರಿ ಮನೆಯ ಹಿತ್ತಿಲಿನಲ್ಲಿರುವ ಶೆಡ್ನಲ್ಲಿ ಬೆಂಕಿ ತಗಲಿ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಡನ್ನಕ್ಕಾಡ್ ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ ಸಮೀಪದ ಟಿ. ರಾಜು (74) ಮೃತಪಟ್ಟವರು. ನಿನ್ನೆ ಸಂಜೆ ೬ ಗಂಟೆಗೆ ಘಟನೆ ನಡೆದಿದೆ. ಇವರ ಪತ್ನಿ ರೆಸಿಡೆನ್ಸ್ ಅಸೋಸಿಯೇಶನ್ ಸಭೆ ಮುಗಿಸಿ ಹಿಂತಿರುಗುವ ವೇಳೆ ಪತಿ ಬೆಂಕಿ ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಹೊಸದುರ್ಗ ಪೊಲೀಸರು ಹಾಗೂ ಕಾಞಂಗಾಡ್ನಿಂದ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಮೃತರು ಪತ್ನಿ ತಂಗಮಣಿರಾಜು, ಮಕ್ಕಳಾದ ಅರುಣ್ರಾಜು, ಅಶ್ವತಿರಾಜು, ಸಹೋದರ ಮನೋಹರನ್, ಸಹೋದರಿಯರಾದ ಇಂದಿರಾ, ಅಂಬುಜಾಕ್ಷಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






