ನಿವೃತ್ತ ದೈಹಿಕ ಶಿಕ್ಷಕ ನಿಧನ

ಮೀಂಜ: ಕೋಳ್ಯೂರು ವಾರಣಾಶಿ ನಿವಾಸಿ ನಿವೃತ್ತ ದೈಹಿಕ ಶಿಕ್ಷಕ ಪದ್ಮನಾಭ ಮಾಸ್ತರ್ (87) ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಕೊಡ್ಲಮೊಗರು ಶ್ರೀ ವಾಣಿ ವಿಜಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಅಧ್ಯಾಪಕ ವೃತ್ತಿಯ ಬಿಡುವಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಾದಸ್ವರ ಹಾಗೂ ಬ್ಯಾಂಡ್ ನುಡಿಸುತ್ತಿದ್ದರು. ಕೆ.ಎಸ್.ಎಸ್.ಪಿ.ಯು ವರ್ಕಾಡಿ ಯೂನಿಟ್ ಸದಸ್ಯರಾಗಿದ್ದರು. ಮೃತರು ಪತ್ನಿ ರತ್ನಾವತಿ, ಮಕ್ಕಳಾದ ವನಮಾಲ, ಸುಪ್ರಭಾ, ಉದಯರಶ್ಮಿ, ಜಯರಾಜ, ಅಳಿಯಂದಿರಾದ ಯತೀಶ, ಪವನ್, ಸೊಸೆ ಶರ್ಮಿಳಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಕೆ.ಎಸ್.ಎಸ್.ಪಿ.ಯು ವರ್ಕಾಡಿ ಯೂನಿಟ್ ಪದಾಧಿಕಾರಿಗಳು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

You cannot copy contents of this page