ಕಾಸರಗೋಡು: ಕೊಡಕ್ಕಾಡ್‌ನ ನಿವೃತ್ತ ಎಸ್‌ಐ ಪಾಲಕ್ಕಾಡ್ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ನಿಧನ ಹೊಂದಿದರು. ಕೊಡಕ್ಕಾಡ್ ವೇಂಙ ಪ್ಪಾರ ತನ್ನಿಮಂಗಲತ್ ಗೋವಿಂದ ವಾರ್ಯರ್‌ರ ಪುತ್ರ ರಾಮಚಂದ್ರ ವಾರ್ಯರ್ (65) ನಿಧನ ಹೊಂದಿದವರು. ನಿನ್ನೆ ಸಂಜೆ ಘಟನೆ ನಡೆದಿದೆ. ಪ್ಲಾಟ್ ಫಾರ್ಮ್‌ನಲ್ಲಿ ಕುಸಿದು ಬಿದ್ದ ರಾಮಚಂದ್ರ ವಾರ್ಯರ್‌ರನ್ನು ಆಸ್ಪತ್ರೆಗೆ ಕೊಂಡೊಯ್ಯಲಾ ಯಿತಾದರೂ ನಿಧನ ಸಂಭವಿಸಿದೆ. ಕಾಞಂಗಾಡ್, ಪಯ್ಯನ್ನೂರು ಸಹಿತ ವಿವಿಧ ಕಡೆಗಳಲ್ಲಿ ಎಸ್‌ಐ, ಎಎಸ್‌ಐ ಆಗಿ ಸೇವೆ ಸಲ್ಲಿಸಿದ್ದರು.







