ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವಿವಿಧ ಸ್ಪರ್ಧೆಗಳು ಮುಂದುವರಿಯುತ್ತಿದ್ದು ಇಂದು ಸಮಾಪ್ತಿಯಾಗಲಿದೆ. ನಿನ್ನೆ ರಾತ್ರಿವರೆಗೆ ನಡೆದ ಸ್ಪರ್ಧೆಗಳಲ್ಲಿ ಕಾಸರಗೋಡು ಉಪಜಿಲ್ಲೆ ೭೫೮ ಅಂಕ ಪಡೆದು ಪ್ರಥಮ ಸ್ಥಾನದಲ್ಲಿದೆ. ಹೊಸದುರ್ಗ ಉಪಜಿಲ್ಲೆ ೭೨೭, ಚೆರುವತ್ತೂರು 682 ಅಂಕ ಪಡೆದು ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿದೆ. ಕುಂಬಳೆ ಉಪಜಿಲ್ಲೆ, ಬೇಕಲ, ಚಿತ್ತಾರಿಕಲ್, ಮಂಜೇಶ್ವರ ಉಪಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಶಾಲಾ ಮಟ್ಟದಲ್ಲಿ ಅರೆಬಿಕ್‌ನಲ್ಲಿ ಯುಪಿ ವಿಭಾಗ- ಅಲ್‌ಬುಕಾರಿಯ ಇ.ಎಂ. ಸ್ಕೂಲ್ ಕುನ್ನುಂಗೈ 30 ಅಂಕ ಪಡೆದಿದೆ. ಎಚ್‌ಎಸ್ ವಿಭಾಗದಲ್ಲಿ ಕಾಞಂಗಾಡ್ ಜಿವಿಎಚ್‌ಎಸ್‌ಎಸ್ 45 ಅಂಕ ಪಡೆದಿದೆ. ಸಂಸ್ಕೃತದಲ್ಲಿ ಪನೆಯಾಲ್ ಎಸ್‌ಎಂಎಯುಪಿ ಶಾಲೆ ಯುಪಿ ವಿಭಾಗದಲ್ಲಿ ೬೫ ಅಂಕ, ಹೈಸ್ಕೂಲ್ ವಿಭಾಗದಲ್ಲಿ ದುರ್ಗ ಎಚ್‌ಎಸ್ ಕಾಞಂಗಾಡ್ ೪೩ ಅಂಕ ಪಡೆದಿದೆ. ಜನರಲ್ ವಿಭಾಗದಲ್ಲಿ ಡಿಬಿಎಯು ಪಿಎಸ್ ಕಯ್ಯಾರ್ ಮಂಜೇಶ್ವರ ಯುಪಿ ವಿಭಾಗ 38 ಅಂಕ, ದುರ್ಗಾ ಎಚ್‌ಎಸ್‌ಎಸ್ ಕಾಞಂಗಾಡ್ ಹೈಸ್ಕೂಲ್ ವಿಭಾಗದಲ್ಲಿ 78 ಅಂಕ, ಎಚ್‌ಎಸ್‌ಎಸ್ ವಿಭಾಗ ಕಪ್ಪಲ್ಲೂರು ಎಚ್‌ಎಸ್‌ಎಸ್ 107 ಅಂಕ ಗಳಿಸಿದೆ.







