ಕಾಸರಗೋಡು: ಓಣಂ ಹಬ್ಬ ಸನಿಹದಲ್ಲಿರುವಂತೆ ತರಕಾರಿಗಳ ಬೆಲೆ ಗಗನದತ್ತ ಮುಖ ಮಾಡಿದೆ. ಲಿಂಬೆಹುಳಿ ಹೊರತುಪಡಿಸಿ ಇತರ ಎಲ್ಲಾ ತರಕಾರಿ ಸಾಮಗ್ರಿಗಳಿಗೆ ಬೆಲೆ 100ರ ಗಡಿ ದಾಟದಿದ್ದರೂ ದಿನ ದಿಂದ ದಿನಕ್ಕೆ ದರ ಹೆಚ್ಚಳವುಂಟಾಗು ತ್ತಿರುವುದು ಓಣಂ ಔತಣದ ಬಗ್ಗೆ ಕುಟುಂ ಬಗಳಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಓಣಂ ಹಬ್ಬದ ಸಮಯವಾಗುವಾಗ ವ್ಯಾಪಾರಿಗಳು ತರಕಾರಿ ಬೆಲೆ ಹೆಚ್ಚಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಜನರು ನುಡಿಯುತ್ತಾರೆ. ಆದರೆ ಮಾರುಕಟ್ಟೆ ಅನುಸಾರವಾಗಿ ಬೆಲೆ ಹೆಚ್ಚಳವಾಗುತ್ತಿರುವುದಾಗಿ ವ್ಯಾಪಾರಿಗಳು ತಿಳಿಸುತ್ತಾರೆ. ತಮಿಳು ನಾಡಿನಿಂದ ಪ್ರಧಾನವಾಗಿ ಕಾಸg ಗೋಡು ಜಿಲ್ಲೆಗೆ ಅಗತ್ಯವಾಗಿರುವ ತರಕಾರಿಗಳು ತಲುಪುತ್ತಿರುವುದು. ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ತರಕಾರಿ ಉತ್ಪಾದನೆಗೆ ಪ್ರತಿಕೂಲ ಪರಿಣಾಮವಾದ ಕಾರಣ ಬೆಲೆ ಹೆಚ್ಚಳಕ್ಕೆ ಕಾರಣವೆಂದು ಮಧ್ಯವರ್ತಿಗಳು ನುಡಿಯುತ್ತಾರೆ.
ಕಳೆದ ವರ್ಷ ತರಕಾರಿ ಬೆಲೆ ರಾಕೆಟ್ನಂತೆ ಮೇಲೇರಿದಾಗ ಮಾರುಕಟ್ಟೆಯಲ್ಲಿ ಸರಕಾರದ ಮಧ್ಯ ಪ್ರವೇಶ ಉಂಟಾಗಿಲ್ಲವೆAದು ಆಕ್ಷೇಪ ಕೇಳಿ ಬಂದಿತ್ತು. ಟೊಮೆಟೊ, ನುಗ್ಗಿ ಕಾಯಿಗೆ 150ರಿಂದ 400 ರೂ.ವರೆಗಾಗಿತ್ತು ಬೆಲೆ. ಲಿಂಬೆ ಹುಳಿಗೆ 300 ರೂ., ಆದರೆ ಈಗ ಇದರ ಬೆಲೆ 100 ರೂ.ನಲ್ಲಿದೆ.
ಇದೇ ವೇಳೆ ಕಾಸರಗೋಡು ನಗರದಲ್ಲಿ ಆದಿತ್ಯವಾರಗಳಂದು ಕರ್ನಾಟಕ ನಿವಾಸಿಗಳ ತರಕಾರಿ ಸಂತೆಯಲ್ಲಿ ಬೆಲೆಗಳಲ್ಲಿ 2 ರೂ.ನಿಂದ 5 ರೂ. ವರೆಗೆ ಕಡಿಮೆ ಇರುವುದಾಗಿ ಗೃಹಿಣಿಯರು ನುಡಿಯುತ್ತಾರೆ. ಆದುದರಿಂದ ಆದಿತ್ಯವಾರದ ಸಂತೆಗೆ ಜನರು ತಲುಪುತ್ತಾರೆ. ಇಂದಿನ ತರಕಾರಿ ಬೆಲೆ ಈ ರೀತಿ ಇದೆ. ಟೊಮೆಟೊ 46, ನೀರುಳ್ಳಿ 30, ಹಸಿಮೆಣಸ 60, ಬಟಾಟೆ 30, ಶುಂಠಿ 72, ಮುಳ್ಳುಸೌತೆ 40, ಸೌತೆಕಾಯಿ 48, ತೊಂಡೆಕಾಯಿ 50, ಬೀನ್ಸ್ 80, ಅಲಸಂಡೆ 70, ಬೆಂಡೆಕಾಯಿ 70, ಕ್ಯಾರೆಟ್ 60, ಬೀಟ್ರೂಟ್ 40, ಕ್ಯಾಬೆಜ್ 26, ನುಗ್ಗೆಕಾಯಿ 60, ಹಾಗಲಕಾಯಿ 80, ಪಡುವಳಕಾಯಿ 50, ಸುವರ್ಣಗಡ್ಡೆ 60, ಚೀನಿಕಾಯಿ 30, ಕುಂಬಳ ಕಾಯಿ 30, ಸೋರೆಕಾಯಿ 50.
