ಬ್ಯಾಂಕ್ ರಸ್ತೆ ಶೋಚನೀಯಾವಸ್ಥೆ: ಬಿಎಂಎಸ್‌ನಿಂದ ನಾಳೆ ದಿಗ್ಬಂಧನ ಮುಷ್ಕರ

ಕಾಸರಗೋಡು: ನಗರದ ಹೃದಯಭಾಗದಲ್ಲಿ ಸಾಗುವ, ಕಾಸರಗೋಡು ನಗರವನ್ನು ರೈಲ್ವೇ ನಿಲ್ದಾಣಕ್ಕೆ ಜೋಡಿಸುವ ಬ್ಯಾಂಕ್ ರಸ್ತೆಯ ಶೋಚನೀಯಾವಸ್ಥೆಗೆ ಪರಿಹಾರ ಕೈಗೊಳ್ಳದ ಅಧಿಕಾರಿಗಳ ಉದಾಸೀನತೆ ವಿರುದ್ಧ  ತೀವ್ರ ಹೋರಾಟ ನಡೆಸಲು ನಿನ್ನೆ ಜರಗಿದ ಬಿಎಂಎಸ್ ಕಾಸರಗೋಡು ವಲಯ ಸಮಿತಿ ಸಭೆ ತೀರ್ಮಾನಿಸಿದೆ. ನಾಳೆ 11 ಗಂಟೆಗೆ ಬ್ಯಾಂಕ್ ರಸ್ತೆಯನ್ನು ದಿಗ್ಬಂಧನಗೊಳಿಸಿ ಮುಷ್ಕರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಲಯ ಅಧ್ಯಕ್ಷ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಜಿಲ್ಲಾ ಸಮಿತಿ ಸದಸ್ಯ ವಿಶ್ವನಾಥ ಶೆಟ್ಟಿ, ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್, ಪದಾಧಿಕಾರಿಗಳಾದ ಉಮೇಶ್ ಎಸ್.ಕೆ, ಶರತ್ ಕಡಪ್ಪುರಂ, ರಂಜಿತ್ ರಾಮ್, ಮನೋಜ್, ಕುಂಞಿಕಣ್ಣನ್, ಪ್ರಸಾದ್ ಭಾಗವಹಿಸಿದರು. ಬಾಬು ಮೋನ್ ಸ್ವಾಗತಿಸಿ, ಕುಂಞಿಕಣ್ಣನ್ ವಂದಿಸಿದರು.

You cannot copy contents of this page