ಚೆನ್ನೈ: ಕಾಂಜೀಪುರದ ಹೆದ್ದಾರಿಯಲ್ಲಿ ಕಾರು ತಡೆದು ನಿಲ್ಲಿಸಿ 4.5 ಕೋಟಿ ರೂ. ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಕೇರಳೀಯರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ದರೋಡೆ ನಡೆಸಿರುವುದಾಗಿ ದೂರಲಾಗಿದೆ. ಈ ಸಂಬಂಧ ಕೊಲ್ಲಂ, ಪಾಲಕ್ಕಾಡ್, ತೃಶೂರು ನಿವಾಸಿಗಳಾದ ಸಂತೋಷ್, ಸುಜಿತ್‌ಲಾಲ್, ಜಯನ್, ಮುರುಗನ್, ಕುಂಞುಮೊಹಮ್ಮದ್ ಎಂಬಿವರನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






