ಉಪ್ಪಳ: ಸ್ಕೂಟರ್‌ನಲ್ಲಿ ದಾಖಲೆಪತ್ರ ಗಳಿಲ್ಲದೆ ಸಾಗಿಸುತ್ತಿದ್ದ 2,87,000 ರೂಪಾಯಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಕರ್ನಾಟಕದ ಕೊಣಾಜೆ ಅಸೈಗೋಳಿ ನಿವಾಸಿ ಧನುಷ್ ಆರ್ (29) ಎಂಬಾತನ ಕೈಯಿಂದ ಹಣ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಗೇರುಕಟ್ಟೆ ಭಾಗದಿಂದ ಕೆದುಂಬಾಡಿ ಭಾಗಕ್ಕೆ ತೆರಳುತ್ತಿದ್ದ ಸ್ಕೂಟರ್‌ನಲ್ಲಿ ಗೇರುಕಟ್ಟೆ ಬಳಿಯ ಮುಡಿಮಾರು ಎಂಬಲ್ಲಿ ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಧನುಷ್ ಮದ್ಯ ಸೇವಿಸಿರುವುದು ತಿಳಿದುಬಂ ದಿದೆ. ವಿಚಾರಿಸಿದಾಗ ತದ್ವಿರುದ್ಧ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಸ್ಕೂಟರ್‌ನ್ನು ಪರಿಶೀಲಿಸಿದಾಗ ಸೀಟಿನ ಅಡಿಭಾಗದಲ್ಲಿ ಬಚ್ಚಿಡಲಾಗಿದ್ದ ಹಣ ಪತ್ತೆಯಾಗಿದೆ. ಹಣಕ್ಕೆ ಸಂಬಂಧಿಸಿ ದಾಖಲೆಪತ್ರಗಳಿಲ್ಲದ ಹಿನ್ನೆಲೆಯಲ್ಲಿ ಅದನ್ನು ವಪಡಿಸಿಕೊಳ್ಳಲಾಗಿದೆ. ಬಳಿಕ ಧನುಷ್‌ನನ್ನು ನೋಟೀಸ್ ನೀಡಿ ಬಿಡುಗಡೆಗೊಳಿಸಲಾಗಿದೆ. ಹಣವನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.







