ಕಾಸರಗೋಡು: ಆನ್‌ಲೈನ್ ಪ್ಲಾಟ್ ಫಾಂ ಮೂಲಕ ಶೇರು ವ್ಯಾಪಾರಕ್ಕಾಗಿ 22.38 ಲಕ್ಷ ರೂ. ಠೇವಣಿ ಪಡೆದು ಅದರ ಲಾಭವನ್ನಾಗಲೀ ಠೇವಣಿ ಹಣ ವನ್ನಾಗಲೀ ಹಿಂತಿರುಗಿಸದೆ ವಂಚಿಸಿದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೀಮೇನಿ ನಿವಾಸಿ ಪಿ.ಶ್ರೀಧರನ್ ಎಂಬವರು ಈ ರೀತಿ ವಂಚನೆಗೊಳಗಾಗಿದ್ದು, ಆ ಬಗ್ಗೆ ಅವರು ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ಯುಟಿಐಎಎಂಸಿ ಎಂಬ ಆನ್‌ಲೈನ್ ಪ್ಲಾಟ್ ಪಾಂನಲ್ಲಿ ಶೇರು ಟ್ರೇಡಿಂಗ್ ಎಂಬ ಹೆಸರಲ್ಲಿ ಅಮಿತ ಲಾಭ ನೀಡುವುದೆಂಬ ವಾಗ್ದಾನ ನೀಡಿ ಆ ಸಂಸ್ಥೆ ತನ್ನಿಂದ ಜೂನ್ 16ರಿಂದ ಆರಂಭಗೊಂಡು ಜುಲೈ ೩೦ರ ತನಕದ ಅವಧಿಯಲ್ಲಿ 22.38 ಲಕ್ಷ ರೂ. ಪಡೆದ ಬಳಿಕ ಲಾಭವನ್ನಾಗಲೀ ಠೇವಣಿ ಹಣವನ್ನಾಗಲೀ ಹಿಂತಿರುಗಿಸದೆ ವಂಚಿಸಿದೆಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶ್ರೀಧರನ್ ತಿಳಿಸಿದ್ದಾರೆ.
