ಕಾಸರಗೋಡು: ಕುಂಬ್ಡಾಜೆ ಪಂಚಾಯತ್‌ನ ಎ.ಪಿ ಸರ್ಕಲ್-ಗೋಸಾಡ-ಬೆಳಿಂಜ ರಸ್ತೆ ಅಭಿವೃದ್ಧಿಗೆ ಆರು ಕೋಟಿ ರೂಪಾಯಿಗಳ ಆಡಳಿತಾನುಮತಿ ಲಭಿಸಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ. 2025-26ರ ಬಜೆಟ್‌ನಲ್ಲಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಶಾಸಕ ಸಲ್ಲಿಸಿದ ಮನವಿಯ ಆಧಾರದಲ್ಲಿ ಈ ಮೊತ್ತ ಮಂಜೂರು ಮಾಡಲಾಗಿದೆ. 4.4 ಕಿಲೋ ಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ ಶೀಘ್ರ ತಾಂತ್ರಿಕ ಅನುಮತಿ ಲಭ್ಯಗೊಳಿಸಿ ಟೆಂಡರ್ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರೊಂದಿಗೆ ಹಲವು ವರ್ಷಗಳಿಂದ ಶೋಚನೀ ಯಾವಸ್ಥೆಯಲ್ಲಿರುವ ಈ ರಸ್ತೆಯಲ್ಲಿ ಸಂಚಾರ ಸುಗಮಗೊಳ್ಳಲಿದೆ.
