ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂಪಾಯಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ 7.45ರ ವೇಳೆ ಪೊಲೀಸರು ಹೈವೇ ಪಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ. ತುಕಾರಾಮ್ ಎಂಬ ವ್ಯಕ್ತಿ ಹಾಗೂ ಅವರ ಪತ್ನಿ ಕಾರಿನಲ್ಲಿದ್ದರು. ಕಾರು ಚಲಾಯಿಸಿರುವುದು ಅಕ್ಷಯ್ ಎಂಬಾತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಭಾಗದಿಂದ ಬಂದ ಕಾರನ್ನು ಸಂಶಯದ ಮೇರೆಗೆ ತಡೆದು ನಿಲ್ಲಿಸಿ ತಪಾಸಣೆಗೈದಾಗ ಅದರಲ್ಲಿ ಹಣ ಪತ್ತೆಯಾಗಿದೆ. ಕಾರು ಪ್ರಯಾಣಿಕರಿಗೆ ಹಣದ ಮೂಲವನ್ನು ತಿಳಿಸಲು ಸಾಧ್ಯ ವಾಗಿಲ್ಲವೆಂದು ಸೂಚನೆಯಿದೆ. ಹೆಚ್ಚಿನ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.






