ಕಾಸರಗೋಡು: ಬೋವಿಕ್ಕಾನ-ಬೇವಿಂಜೆ ರಸ್ತೆ ಅಭಿವೃದ್ಧಿಗೆ ೪ಕೋಟಿ ೮೦ ಲಕ್ಷ ರೂ. ಮಂಜೂರು ಮಾಡಿರುವುದಾಗಿ ಶಾಸಕ ಎನ್.ಎ. ನೆಲ್ಲಿಕುನ್ನು ತಿಳಿಸಿದ್ದಾರೆ. ಚೌಕಿ ಕುನ್ನಿಲ್-ಮಜಲ್-ಉಜಿರೆಕೆರೆ ರಸ್ತೆ, ಕೋಟೆಗುಡ್ಡೆ-ಮೊಗರ್ ಮಸೀದಿ ರಸ್ತೆ ಎಂಬಿವುಗಳ ಅಭಿವೃದ್ಧಿಗೆ ಕಾಸರ ಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮೊತ್ತ ಮಂಜೂರು ಮಾಡಲಾಗಿದೆ. ಈ ಮೂರೂ ರಸ್ತೆಗಳಿಗಾಗಿ 8 ಕೋಟಿ 96 ಲಕ್ಷ ರೂ. ಮಂಜೂರು ಮಾಡಿರುವುದಾಗಿ ಶಾಸಕರು ತಿಳಿಸಿ ದ್ದಾರೆ. ಉಜಿರೆಕೆರೆ ರಸ್ತೆಗೆ 1 ಕೋಟಿ 93 ಲಕ್ಷ, ಮೊಗರ್ ರಸ್ತೆಗೆ 2 ಕೋಟಿ 23 ಲಕ್ಷ ರೂ. ಮಂಜೂರು ಮಾಡಲಾಗಿದೆ. ಇದರ ಆಡಳಿತ ಅನುಮತಿಗಾಗಿ ಸ್ಟೇಟ್ ಲೆವೆಲ್ ಎಂಪವರಿಂಗ್ ಸಮಿತಿಯ ಅಂಗೀಕಾರ ಕ್ಕಾಗಿ ವಿನಂತಿಸಲಾಗಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ.







