ಪೈವಳಿಕೆ: ತೋಟದ ಹಿತ್ತಿಲ ಕಟ್ಟಡದಲ್ಲಿ ದಾಸ್ತಾನಿರಿಸಿದ್ದ ಎರಡು ಟನ್ ರಬ್ಬರ್ ಹಾಲು ಕಳವುಗೈದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.
ಬಾಯಿಕಟ್ಟೆ ಪೆರಿಯಪ್ಪಾಡಿ ಯಲ್ಲಿ ಶಿಹಾಬ್ ಎಂಬವರು ಗೇಣಿ ರೂಪದಲ್ಲಿ ಪಡೆದು ನಡೆಸುತ್ತಿರುವ ತೋಟದಲ್ಲಿ ದಾಸ್ತಾನು ಇರಿಸಿದ್ದ ಮಾಲನ್ನು ಈ ರೀತಿ ಕಳವುಗೈಯ್ಯಲಾಗಿದೆ.
ಈ ತೋಟ ನಡೆಸುತ್ತಿರುವ ಶಿಹಾಬ್ ಅಕ್ಟೋಬರ್ 12ರಂದು ಸಂಜೆ ತಮ್ಮ ಊರಿಗೆ ಹೋಗಿದ್ದರು. ಅ. ೧೮ರಂದು ಅವರು ಹಿಂತಿರುಗಿ ಬಂದಾಗಲಷ್ಟೇ ಕಳವು ನಡೆದ ವಿಷಯ ಅವರಗಮನಕ್ಕೆ ಬಂದಿದೆ. ತೋಟದ ಗೇಟು ಮತ್ತು ಕಟ್ಟಡದ ಬಾಗಿಲ ಬೀಗ ಒಡೆದು ಕಳ್ಳರು ಒಳನುಗ್ಗಿ ಕಳವು ನಡೆಸಿದ್ದಾರೆ. ಆ ಬಗ್ಗೆ ಶಿಹಾಬ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳವುಗೈದ ಮಾಲು ಮೂರು ಲಕ್ಷ ರೂ. ಮೌಲ್ಯ ಹೊಂದಿದೆ. ಪೊಲೀ ಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆ ಪರಿಸರದ ರಸ್ತೆಗಳ ಸಿಸಿಟಿವಿ ಕ್ಯಾಮರಾಗಳ ದೃಶ್ಯವನ್ನು ಪೊಲೀಸರು ಪರಿಶೀಲಿ ಸತೊಡಗಿದ್ದಾರೆ.