ಏಳ್ಕಾನದಲ್ಲಿ ರಬ್ಬರ್ ಶೀಟ್ ಯಂತ್ರ ಕಳವು

ಬದಿಯಡ್ಕ: ಶೇಣಿ ಏಳ್ಕಾನದಲ್ಲಿ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ರಬ್ಬರ್ ಶೀಟ್ ಯಂತ್ರ ಕಳವಿಗೀಡಾಗಿದೆ.  ಜೂನ್ 22ರಿಂದ  ೨೮ರ ಮಧ್ಯೆ  ಕಳವು ನಡೆದಿರುವುದಾಗಿ ಕಂಪೆನಿಯ ಮಾಲಕ ಕನ್ನಾಟಿಕಾನದ  ಸೋಜನ್ ಜೋರ್ಜ್ ಬದಿಯಡ್ಕ ಪೊಲೀಸರಿಗೆ  ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  ದೂರುಗಾರ, ಅವರ  ಅಣ್ಣನ ಪತ್ನಿ ಹಾಗೂ ಸಹೋದರಿ ಸೇರಿ ಏಳ್ಕಾನದಲ್ಲಿ  ಪಿ.ವಿ.ರಬ್ಬರ್ಸ್ ಎಂಬ ವ್ಯಾಪಾರ ಸಂಸ್ಥೆಯನ್ನು ಆರಂಭಿಸಿದ್ದರು.  ಸ್ವಂತ ತೋಟದಿಂದ ಸಂಗ್ರಹಿಸಿದ ಹಾಗೂ ಕೃಷಿಕರಿಂದ  ಲ್ಯಾಟೆಕ್ಸ್ ಖರೀದಿಸಿ ಕಂಪೆನಿ ಕಾರ್ಯಾಚರಿಸುತ್ತಿತ್ತು.    ಇತ್ತೀಚೆಗೆ ಸಮೀಪದ ಗುಡ್ಡೆ ಕುಸಿದು ಸಂಸ್ಥೆಯ ಮೇಲೆ ಬಿದ್ದಿದೆ. ಇದರಿಂದ ಸಂಸ್ಥೆಯ ಚಟುವಟಿಕೆ ಮೊಟಕುಗೊಂಡಿತ್ತು. ಈಮಧ್ಯೆ ಕಂಪೆನಿಯಿಂದ  600 ಕಿಲೋ ತೂಕದ ಆಟೋಮ್ಯಾಟಿಕ್ ಯಂತ್ರವನ್ನು ಕಳವು ನಡೆಸಲಾಗಿದೆ. ಇದೇ ವೇಳೆ ಯಂತ್ರವನ್ನು ಕಳವು ನಡೆಸಿದವರ ಕುರಿತು ಪೊಲೀಸರಿಗೆ ಸೂಚನೆಗಳು ಲಭಿಸಿರುವುದಾಗಿ ಹೇಳಲಾಗುತ್ತಿದೆ.

You cannot copy contents of this page