ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ದ್ವಾರಪಾಲಕ ವಿಗ್ರಹಕ್ಕೆ ಹೊದಿಸಲಾಗಿದ್ದ 42.8 ಕೆಜಿ ತೂಕದ ಕವಚದಲ್ಲಿ ನಾಪತ್ತೆಯಾಗಿದ್ದ 42.5 ಕೆಜಿ ಚಿನ್ನವನ್ನು ತಿರುವಿದಾಂಕೂರು ಮುಜರಾಯಿ ಮಂಡಳಿಯ ವಿಜಿಲೆನ್ಸ್ ವಿಭಾಗವು ಪೊಲೀಸರ ಸಹಾಯದಿಂದ ತಿರುವನಂತಪುರ ದಿಂದ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಈ ಚಿನ್ನವನ್ನು ಕೊಡುಗೆಯಾಗಿ ನೀಡಿದ್ದ ತಿರುವನಂತಪುರ ವೆಂಙಾರ ಮೂಡ್‌ನ ಉಣ್ಣಿಕೃಷ್ಣನ್‌ರ ಸಂಬಂಧಿಕರೋರ್ವರ ಮನೆಯಿಂದ ಪತ್ತೆಹಚ್ಚಲಾಗಿದೆ. ಶಬರಿಮಲೆ ಕ್ಷೇತ್ರದ ದ್ವಾರಪಾಲಕ ವಿಗ್ರಹದ ಚಿನ್ನ ನಾಪತ್ತೆಯಾದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ನಿರ್ದೇಶ ನೀಡಿತ್ತು. ಶ್ರೀ ದೇಗುಲದ ಚಿನ್ನ ನಾಪತ್ತೆಯಾದ ಹಿಂದೆ ಭಾರೀ ಒಳಸಂಚು ನಡೆದಿದೆಯೆಂದು ಇದೇ ಸಂದರ್ಭದಲ್ಲಿ ತಿರುವಿದಾಂಕೂರು ಮುಜರಾಯಿ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದಾರೆ. ಪಂಪಾದಲ್ಲಿ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮ ಹಮ್ಮಿಕೊಂಡ ವೇಳೆಯಲ್ಲೇ ಈ ಚಿನ್ನ ನಾಪತ್ತೆಯಾಗಿದೆ. ಇದರಿಂದಾಗಿ ಸಂಗಮ ಕಾರ್ಯಕ್ರಮದ ಮೆರುಗನ್ನು ಕೆಡಿಸಲು ಕೆಲವರು ನಡೆಸಿದ ಷಡ್ಯಂತ್ರ ಇದಾಗಿರಬಹುದೆಂಬ ಸಂಶಯ ವನ್ನು ಮಂಡಳಿ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅದರ ಪ್ರಾಯೋಜಕರನ್ನು ಒಳಪಡಿಸಿ ಸಮಗ್ರ ತನಿಖೆ ನಡೆಸಲಾ ಗುವುದೆಂದು ಅವರು ಹೇಳಿದ್ದಾರೆ.