ಶಬರಿಮಲೆ ಚಿನ್ನ ಕಳವು ಪ್ರಕರಣ : ಮುಜರಾಯಿ ಮಂಡಳಿ ಮಾಜಿ ಆಯುಕ್ತ ಸೆರೆ; ಒಂದನೇ ಆರೋಪಿಯ ವಿದೇಶ ವ್ಯವಹಾರಗಳ ಬಗ್ಗೆ ತನಿಖೆ

 ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ತಿರುವಿದಾಂ ಕೂರು ಮುಜರಾಯಿ ಮಂಡಳಿಯ ಆಯುಕ್ತರಾಗಿದ್ದ ಕೆ.ಎಸ್. ಬೈಜುರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಈಗ ನಾಲ್ಕಕ್ಕೇರಿದೆ.  ಈ ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಮಂಡಳಿಯ ಅಡ್ಮಿನಿಸ್ಟ್ರೇ ಟಿವ್ ಆಫೀಸರ್ ಆಗಿದ್ದ ಮುರಾರಿಬಾಬು ಮತ್ತು ಮಾಜಿ ಎಕ್ಸಿಕ್ಯೂಟಿವ್ ಆಫೀಸರ್ ಸುಧೀಶ್ ಕುಮಾರ್‌ರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಬೈಜುರ ಬಂಧನ ನಡೆದಿದೆ. ಇವರನ್ನು ಈ ಪ್ರಕರಣದ ಏಳನೇ ಆರೋಪಿಯನ್ನಾಗಿ ಸೇರ್ಪಡೆಗೊಳಿಸ ಲಾಗಿದೆ. ಬೈಜು ತಿರುವಿದಾಂಕೂರು ಮಂಡಳಿಯ ಆಯುಕ್ತರಾಗಿದ್ದ ವೇಳೆ ಶಬರಿಮಲೆ ದೇಗುಲದ ಚಿನ್ನ ಲೇಪಿತ ದ್ವಾರಪಾಲಕ ಮೂರ್ತಿಗಳ ಕವಚ ಮತ್ತು ಚಿನ್ನ ಲೇಪಿತ ಗರ್ಭಗುಡಿಯ ಬಾಗಿಲು ಕೇವಲ ತಾಮ್ರದ್ದಾಗಿತ್ತೆಂದು ಮಂಡಳಿಯ ಸಂಬಂಧಪಟ್ಟ ದಾಖಲು ಪತ್ರಗಳಲ್ಲಿ ದಾಖಲಿಸ ಲಾಗಿತ್ತು. ಅದಕ್ಕೆ ಸಂಬಂಧಿಸಿ ಬೈಜುರನ್ನು ಈ ಪ್ರಕರಣದಲ್ಲಿ ಏಳನೇ ಆರೋಪಿಯನ್ನಾಗಿ  ಸೇರ್ಪಡೆ ಗೊಳಿಸಿ ಅವರನ್ನು ಬಂಧಿಸಲಾಗಿದೆ.

ಕಾನೂನುಪ್ರಕಾರವಾಗಿ ದೇವಸ್ಥಾನದ ಆಸ್ತಿಗಳನ್ನು ಸಂರಕ್ಷಿಸುವ ಜವಾಬ್ದಾರಿಕೆ ಹೊಂದಿರುವ ಅಧಿಕಾರಿಯಾಗಿದ್ದಾರೆ ಮುಜರಾಯಿ ಮಂಡಳಿ ಆಯುಕ್ತರು.

ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಅಂತಾರಾಷ್ಟ್ರೀಯ ವಿಗ್ರಹ ಕಳ್ಳಸಾಗಾಟ ದಾರರ ಕೈವಾಡ ಶಂಕೆಯನ್ನು ಹೈಕೋರ್ಟ್ ಮೊನ್ನೆ ವ್ಯಕ್ತಪಡಿಸಿತ್ತು. ಅದರಿಂದಾಗಿ ಆ ಬಗ್ಗೆಯೂ ತನಿಖಾ ತಂಡ ಇನ್ನೊಂದೆಡೆ ತನಿಖೆ ಆರಂಭಿಸಿದೆ. ಇದು ಮಾತ್ರವಲ್ಲ ಈ ಪ್ರಕರಣದ ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಯ ವಿದೇಶಿ ವ್ಯವಹಾರಗಳ ಬಗ್ಗೆಯೂ ತಂಡ ಸಮಗ್ರ ತನಿಖೆ ಆರಂ ಭಿಸಿದೆ. ಈತ  ವಿದೇಶದೊಂದಿಗೆ ಹಲವು ರೀತಿಯ ವ್ಯವಹಾರಗಳನ್ನು ಹೊಂದಿರುವ ಬಗ್ಗೆ ಕೆಲವೊಂದು ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ  ತಂಡ ಈ ತನಿಖೆ ಆರಂಭಿಸಿದೆ.

You cannot copy contents of this page