ಶಬರಿಮಲೆ: ಮಂಡಲ ಪೂಜೆ ಮಹೋತ್ಸವ ಇಂದು ಬೆಳಿಗ್ಗೆ ನಡೆದಿದ್ದು, ಶಬರಿಮಲೆ ಹಾಗೂ ಪರಿಸರ ಭಕ್ತರಿಂದ ತುಂಬಿ ತುಳುಕುತ್ತಿದೆ. ತಂಗಅಂಗಿ ಸಮರ್ಪಿಸಿ ಧರ್ಮಶಾಸ್ತನಿಗೆ ಇಂದು ದೀಪಾರಾಧನೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಗೆ ನಡೆ ಬಾಗಿಲು ಮುಚ್ಚಿದರೆ ಮತ್ತೆ ಮಕರಜ್ಯೋತಿ ಮಹೋತ್ಸವಕ್ಕೆ 30ರಂದು ತೆರೆಯಲಾಗುವುದು. ನಿನ್ನೆ ಚಿನ್ನಾಭರಣ ಶೋಭಾಯಾತ್ರೆ ಶಬರಿಮಲೆಗೆ ತಲುಪಿತ್ತು.







