ಕೊಚ್ಚಿ: ಶಬರಿಮಲೆ ದೇಗುಲದಲ್ಲಿ ಚಿನ್ನ ನಾಪತ್ತೆಯಾಗಿರುವುದು ಕಳವೇ ಆಗಿದೆಯೆಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳಿಗ್ಗೆ ಹೈಕೋರ್ಟ್‌ಗೆ ಸಲ್ಲಿಸಿದ ತನಿಖೆಯ ಪ್ರಗತಿಯ ಕುರಿತಾದ ಮಧ್ಯಂತರ ವರದಿಯಲ್ಲಿ ತಿಳಿಸಿದೆ.
ಪ್ರಸ್ತುತ ಪ್ರಕರಣದ ತನಿಖೆಯ ಪ್ರಗತಿಯ ಕುರಿತಾದ ವರದಿಯನ್ನು ಹಂತಹಂತವಾಗಿ ಸಲ್ಲಿಸುವಂತೆ ಹೈಕೋ ರ್ಟ್ ತನಿಖಾ ತಂಡಕ್ಕೆ ನಿರ್ದೇಶ ನೀಡಿತ್ತು. ಅದರಂತೆ ಈತನಕ ನಡೆಸ ಲಾದ ತನಿಖೆಯ ವರದಿಯನ್ನು ಎಸ್‌ಐಟಿ ಇಂದು ಹೈಕೋರ್ಟ್‌ಗೆ ಸಲ್ಲಿಸಿದೆ. ಹೈಕೋರ್ಟ್‌ನ ಮುಚ್ಚಿದ ಕೊಠಡಿಯಲ್ಲಿ ಸಂಬಂಧಪಟ್ಟ ನ್ಯಾಯ ಮೂರ್ತಿಗಳು ಈ ವರದಿಯನ್ನು ಪರಿಶೀಲಿಸಿದರು. ಆ ವೇಳೆ ತನಿಖಾ ತಂಡದವರ ಹೊರತಾಗಿ ಇತರ ಯಾರಿಗೂ ಅದರೊಳಗೆ ಪ್ರವೇಶ ನೀಡಲಾಗಿಲ್ಲ. ಶಬರಿಮಲೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಯನ್ನು ಮಾತ್ರವೇ ಈ ತನಕ ಬಂಧಿಸ ಲಾಗಿದೆ. ಉಳಿದ ಆರೋಪಿಗಳ ಹೇಳಿಕೆಯನ್ನು ಎಸ್‌ಐಟಿ ಶೀಘ್ರ ದಾಖಲಿಸಿ ಅವರನ್ನೂ ಬಂಧಿಸುವ ಸಾಧ್ಯತೆ ಇದೆ. ಮಾತ್ರವಲ್ಲ ಇನ್ನೊಂದೆಡೆ ಕದ್ದ ಚಿನ್ನವನ್ನು ಮರುವಶಪಡಿಸುವ ತೀವ್ರ ಯತ್ನದಲ್ಲೂ ತನಿಖಾ ತಂಡ ತೊಡಗಿದೆ.