ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣ: ವಿಧಾನಸಭೆಯಲ್ಲಿ ಭುಗಿಲೆದ್ದ ಆಕ್ರೋಶ: ಮುಜರಾಯಿ ಸಚಿವರ ರಾಜೀನಾಮೆಗೆ ವಿಪಕ್ಷೀಯರ ಪಟ್ಟು

ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರ ಪಾಲಕ ಮೂರ್ತಿಯ ಚಿನ್ನ ನಾಪತ್ತೆಯಾದ ಪ್ರಕರಣದ ಕಾವು ವಿಧಾನಸಭೆಯನ್ನು ಇಂದು ಅಲ್ಲೋಲ ಕಲ್ಲೋಲಗೊಳಿಸಿದೆ. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಪುನಃ ಆರಂಭಗೊಂಡು ಪ್ರಶ್ನೋತ್ತರ ವೇಳೆಯಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್  ಮಾತನಾಡು ತ್ತಿರುವಂತೆಯೇ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಎದ್ದು ನಿಂತು   ಪ್ರಶ್ನೋತ್ತರ ವೇಳೆಯನ್ನು ಬದಿಗಿರಿಸಿ ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು  ಆಗ್ರಹಪಟ್ಟರು. ಆದರೆ ಅದಕ್ಕೆ ಕಿವಿಗೊಡದ ವಿಧಾನಸಭಾಧ್ಯಕ್ಷ ಎ.ಎನ್. ಶಂಸೀರ್ ಪ್ರಶ್ನೋತ್ತರ ವೇಳೆಯನ್ನು  ಮುಂದುವರಿಸಿದರು. ಅದರಿಂದ ಕುಪಿತರಾದ ವಿಪಕ್ಷೀಯರು  ಪ್ರತಿಭಟಿಸಿ ಮುಗಿಲು ಮುಟ್ಟುವ ಘೋಷಣೆಗಳನ್ನು ಕೂಗುತ್ತಾ ಕಾಡುಗಳ್ಳರು ಮತ್ತು ದೇವಸ್ಥಾನವನ್ನು ನುಂಗುವವರು ಎಂದು ಬರೆದ ಬ್ಯಾನರ್‌ನ್ನು  ಕೈಯಲ್ಲಿ ಹಿಡಿದುಕೊಂಡು ವಿಧಾನಸಭಾಧ್ಯಕ್ಷರ ಪೀಠವನ್ನು ಸುತ್ತುವರಿದರು. ಮಾತ್ರವಲ್ಲ  ಮುಜರಾಯಿ ಖಾತೆ ಸಚಿವ ವಿ.ಎನ್. ವಾಸವನ್ ಮತ್ತು ತಿರುವಿದಾಂಕೂರು ಮುಜರಾಯಿ ಮಂಡಳಿಯ ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದರು. ಆದರೆ ಯಾವುದೇ ಚರ್ಚೆಗೆ ಮೊದಲು ಗೊತ್ತುವಳಿ ಮಂಡಿಸಬೇಕು. ಅದಕ್ಕೆ ತಯಾರಾಗದೆ ವಿಧಾನಸಭಾ ಅಧ್ಯಕ್ಷರ ವೀಠವನ್ನು ವಿಪಕ್ಷೀಯರು ಸುತ್ತುವರಿಯುವುದಕ್ಕೆ ವಿಧಾನಸಭಾ ಅಧ್ಯಕ್ಷರು ಕೆಂಡಾಮಂಡಲಗೊಂಡರು. ಪ್ರತಿಭಟನೆ ಮುಗಿಲು ಮುಟ್ಟುತ್ತಿರುವಂತೆಯೇ ಪ್ರಶ್ನೋತ್ತರ ವೇಳೆಯಲ್ಲಿ ಅಲ್ಲಿಗೆ ನಿಲ್ಲಿಸಬೇಕಾಗಿಬಂತು.

ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ಬಗ್ಗೆ ಮುಜರಾಯಿ ಮಂಡಳಿಯ ವಿಜಿಲೆನ್ಸ್ ತಂಡ  ಸಮಗ್ರ ತನಿಖೆ ನಡೆಸುತ್ತಿದೆ. ಈ ವಿಷಯದಲ್ಲಿ ಚರ್ಚೆಗೆ ಸರಕಾರ ಸಿದ್ಧವಿದೆ. ಆದರೆ ಅದಕ್ಕೆ ತಯಾರಾಗದೆ ವಿಪಕ್ಷಗಳು ನುಣುಚಿಕೊಳ್ಳುತ್ತಿದೆಯೆಂದು ಇದೇ ಸಂದರ್ಭದಲ್ಲಿ ಸಚಿವ ಎಂ.ಡಿ. ರಾಜೇಶ್ ಹೇಳಿದರು. ಆದರೂ ಸದ್ದುಗದ್ದಲ ಮುಂದುವರಿಯಿತು.

RELATED NEWS

You cannot copy contents of this page