ಶಬರಿಮಲೆ ದೇಗುಲದ ಚಿನ್ನ ಕಳವು: ಅಂತಾರಾಷ್ಟ್ರೀಯ ಕಳ್ಳಸಾಗಾಟಗಾರರ ಕೈವಾಡ ಶಂಕೆ ವ್ಯಕ್ತಪಡಿಸಿದ ಹೈಕೋರ್ಟ್

ಕೊಚ್ಚಿ: ಶಬರಿಮಲೆ ದೇಗುಲದ ಗರ್ಭಗುಡಿ ಬಾಗಿಲು ಮತ್ತು ಅದರ ದ್ವಾರಪಾಲಕ ಮೂರ್ತಿಗಳ ದುರಸ್ತಿ ಕೆಲಸದ ಹಿಂದೆ ಅಮೂಲ್ಯವಾದ ಪ್ರಾಚೀನ ವಸ್ತುಗಳನ್ನು ಸಾಗಿಸುವ ಅಂತಾರಾಷ್ಟ್ರೀಯ ಕಳ್ಳಸಾಗಾಟದಾರರ ಕೈವಾಡವಿದೆಯೆಂಬ ಶಂಕೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ವ್ಯಕ್ತಪಡಿಸಿದೆ.

ಭಾರತೀಯ ವಂಶಜನಾಗಿರುವ ಅಮೆರಿಕಾದ ಪ್ರಜೆ ಹಾಗೂ ಅಂತಾರಾಷ್ಟ್ರೀಯ ವಿಗ್ರಹ ಮತ್ತು ಪ್ರಾಚೀನ ವಸ್ತುಗಳ ಕಳ್ಳಸಾಗಾಟದಾರ ಸುಭಾಶ್ ಕಪೂರ್ ನಡೆಸುತ್ತಿರುವರ  ರೀತಿಯ ಆಪರೇಶನ್ ಕಾರ್ಯಾ ಚರಣೆಯ ಸಮಾನತೆ ಶಬರಿಮಲೆ ದೇಗುಲದಲ್ಲಿ ನಡೆದ ಕಳವು ಪ್ರಕರಣವೂ ಹೊಂದಿದೆಯೆಂದು ಹೈಕೋರ್ಟ್ ಹೇಳಿದೆ. ಮಾತ್ರವಲ್ಲ ಶಬರಿಮಲೆ ದೇಗುಲದ ಗರ್ಭಗುಡಿಗೆ ಚಿನ್ನದ ಬಾಗಿಲನ್ನು ಅಳವಡಿಸಿದ ನಂತರ ಚಿನ್ನ ಲೇಪನಗೈದ ಹಳೆ ಬಾಗಿಲನ್ನು ಅಲ್ಲಿಂದ ಸಾಗಿಸಲು ಈ ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಗೆ ಮುಜರಾಯಿ ಮಂಡಳಿ ನೀಡಿದ ಅನುಮತಿಯ ಬಗ್ಗೆಯೂ ವಿಶೇಷ ತನಿಖಾ ತಂಡ ಸಮಗ್ರ ತನಿಖೆ ನಡೆಸಬೇಕೆಂದು ನ್ಯಾಯಮೂರ್ತಿ ರಾಜಾ ವಿಜಯ ರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್‌ರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ನಿರ್ದೇಶ ನೀಡಿದೆ. ಶಬರಿಮಲೆ ದೇಗುಲದ ಗರ್ಭಗುಡಿಯ 2519.760 ಗ್ರಾಂ (315 ಪವನ್) ಚಿನ್ನ ಲೇಪಿತ ಬಾಗಿಲಿನ ಬದಲು ಉಣ್ಣಿಕೃಷ್ಣನ್ ಪೋತ್ತಿ ತಂದ 324.400 ಗ್ರಾಂ (40.5 ಪವನ್) ಚಿನ್ನ ಲೇಪಿತ ಬಾಗಿಲನ್ನು ಗರ್ಭಗುಡಿಗೆ ಅಳವಡಿಸಲಾಗಿತ್ತೇ ಎಂಬ ಸಂಶಯವನ್ನು ನ್ಯಾಯಾಲಯ  ವ್ಯಕ್ತಪಡಿಸಿದೆ. ಆ ಬಗ್ಗೆ ತನಿಖೆ ನಡೆಸುವಂತೆಯೂ ನಿರ್ದೇಶ ನೀಡಿದೆ. ಮುಜರಾಯಿ ಮಂಡಳಿಯು ದಾಖಲುಪತ್ರಗಳನ್ನು ಹಾಗೂ ಲೆಕ್ಕಾಚಾರಗಳನ್ನು ಸರಿಯಾದ ಸಮಯದಲ್ಲಿ ಸಂಬಂಧಪಟ್ಟ ದಾಖಲುಪತ್ರಗಳಲ್ಲಿ ನಮೂದಿಸದೇ ಇರುವುದು ಅವ್ಯವಹಾರಗಳನ್ನು ಮರೆಮಾಚುವ ಉದ್ದೇಶಪೂರ್ವಕವಾದ ಯತ್ನವಾಗಿದೆ. ಗರ್ಭಗುಡಿಯ ಪ್ರಧಾನ ಬಾಗಿಲುಗಳು, ದ್ವಾರಪಾಲಕ ಮೂರ್ತಿಗಳು,ಪೀಠಗಳು ಮತ್ತಿತರ  ಪುರಾತನ ವಸ್ತುಗಳ ಅಳತೆ ಹಾಗೂ ತೂಕ ನಡೆಸಲು  ಹಾಗೂ ಅವುಗಳ ಪರ್ಯಾಯ ನಿರ್ಮಿಸಲು ಅನುಮತಿ ನೀಡಿದ ವಿಷಯದಲ್ಲಿ ಮಂಡಳಿಯ ಅನಾಸ್ಥೆ ಎದ್ದು ತೋರಿಸುತ್ತಿದೆ. ಇದನ್ನೆಲ್ಲಾ ಪರಿಶೀಲಿಸುವಾಗ ದೇವಸ್ಥಾನಗಳ ಪ್ರಾಚೀನ ಕಲಾ ವಸ್ತುಗಳು ಹಾಗೂ ವಿಗ್ರಹಗಳನ್ನು ದರೋಡೆಗೈಯ್ಯುವ ಅಂತಾರಾಷ್ಟ್ರೀಯ ಕಳ್ಳ ಸಾಗಾಟದಾರ ಸುಭಾಶ್ ಕಪೂರ್ ನಡೆಸುತ್ತಿರುವ ಕೃತ್ಯಗಳಿಗೆ ಸಮಾನತೆ ಇದ್ದಂತೆ ಬಾಸವಾಗುತ್ತಿದೆಯೆಂದು ನ್ಯಾಯಾಲಯ ಹೇಳಿದೆ.

ಯಾರು ಈ ಸುಭಾಸ್ ಕಪೂರ್

ಕೊಚ್ಚಿ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಳವು ತಂಡದ ವರದಿಯನ್ನು ಪರಿಶೀಲಿಸುತ್ತಿದ್ದ ವೇಳೆ ಹೈಕೋರ್ಟ್ ಪರಾಮರ್ಶೆ ನಡೆಸಿದ ಕುಖ್ಯಾತ ಅಂತಾರಾಷ್ಟ್ರೀಯ ಕಳ್ಳಸಾಗಾಟದಾರ ಸುಭಾಷ್ ಕಪೂರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾದರು.  ಸುಭಾಷ್ ಕಪೂರ್ ಭಾರತೀಯ ಸಂಜಾತನಾದ ಅಮೆರಿಕ ಪ್ರಜೆಯಾಗಿದ್ದಾನೆ.  ಪ್ರಾಚೀನ ಹಾಗೂ ಅಮೂಲ್ಯ ವಸ್ತುಗಳು ಮತ್ತು ಕಲಾಕೃತಿಗಳನ್ನು ಕದ್ದು ಸಾಗಿಸುವ ಅಂತಾರಾಷ್ಟ್ರೀಯ ಕಳ್ಳಸಾಗಾಟದಾರನಾಗಿದ್ದಾನೆ ಈತ. ತಮಿಳುನಾಡಿನಿಂದ

14ನೇ ಶತಮಾನದ ಪಾರ್ವತಿ ದೇವಿಯ ವಿಗ್ರಹ ಹಾಗೂ ಇತರ ಹಲವು ಅಮೂಲ್ಯ ವಸ್ತುಗಳನ್ನು ಕದ್ದು ಸಾಗಿಸಿ ಅವುಗಳನ್ನು ಭಾರೀ ಬೆಲೆಗೆ ವಿದೇಶದಲ್ಲಿ ಮಾರಾಟಮಾಡು ವುದು ಈತನ ಕಸುಬಾಗಿದೆ. ಈತನನ್ನು 2011ರಲ್ಲಿ ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ಸೆರೆಹಿಡಿದಿದ್ದರು. ಮಾತ್ರವಲ್ಲ ಆತನ ಕೈವಶವಿದ್ದ 44 ಕೋಟಿ ರೂ. ಮೌಲ್ಯದ ಪ್ರಾಚೀನ ವಸ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ತಮಿಳುನಾಡಿನಿಂದ ಕದ್ದ ಪಾರ್ವತಿ ವಿಗ್ರಹ  ಕಳವು ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ನಂತರ ಭಾರತಕ್ಕೆ ಹಸ್ತಾಂತರಿಸಲಾಗಿದ್ದು ಆತ ಈಗ ತಮಿಳುನಾಡು ತಿರುಚ್ಚಿರಾಪಳ್ಳಿ ಜೈಲಿನಲ್ಲಿದ್ದಾನೆ.

You cannot copy contents of this page