ಹೊಸದುರ್ಗ: 12ರ ಹರೆಯದ ಬಾಲಕನನ್ನು ಸಲಿಂ ಗರತಿ ದೌರ್ಜನ್ಯಕ್ಕೀಡುಮಾಡಿದ ಪ್ರಕರಣದ ಆರೋಪಿ ಸೆರೆಯಾಗಿದ್ದಾನೆ. ಪಟ್ಟಾನ್ನೂರ್ ವರುವಕ್ಕಾಡ್ ಲಕ್ಷ್ಯಂವೀಡು ಉನ್ನತಿಯ ವಡಕ್ಕೇಕಂಡಿ ಹೌಸ್ ವಿ.ಕೆ. ವಿನೀಶ್ (39)ನನ್ನು ಮಟ್ಟನ್ನೂರು ಎಸ್ಐ ಫೈರೂಸ್ ಬಂಧಿಸಿದ್ದಾರೆ. ಮಟ್ಟನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕನಿಗೆ ಈತ ದೌರ್ಜನ್ಯಗೈದಿದ್ದು, ಈ ಬಗ್ಗೆ ಪೋಕ್ಸೋ ಪ್ರಕರಣ ದಾಖ ಲಿಸಲಾಗಿತ್ತು.





