ಉಪ್ಪಳ: ಸಂಘಪರಿವಾರ ಕಾರ್ಯಕರ್ತ, ಟೈಲರ್ ಬಂ ದ್ಯೋಡು ವಳಚ್ಚಲ್ ನಿವಾಸಿ ದಿ| ಬಾಬು ಟೈಲರ್‌ರವರ ಪುತ್ರ ಸುಧಾಕರ (47) ಹೃದಯಘಾತ ದಿಂದ ನಿಧನ ಹೊಂದಿದ್ದಾರೆ. ಬಂದ್ಯೋಡಿನಲ್ಲಿ ಕಳೆದ ಹಲವು ವರ್ಷಗಳಿಂದ ಟೈಲರ್ ಆಗಿದ್ದರು. ನಿನ್ನೆ ಅಪರಾಹ್ನ ಇವರಿಗೆ ಎದೆ ನೋವು ಉಂಟಾಗಿದ್ದು, ಉಪ್ಪಳದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ತಪಾಸಣೆ ನಡೆಸಿದಾಗ ಗಂಭೀರಾ ವಸ್ಥೆ ಇರುವುದರಿಂದ ತಕ್ಷಣ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ. ಇವರು ಆರ್.ಎಸ್.ಎಸ್, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವಿವಾಹಿತರಾದ ಮೃತರು ತಾಯಿ ಗಿರಿಜ, ಸಹೋದರಿಯರಾದ ಗೀತಾ, ಅಮಿತ, ಪೂರ್ಣಿಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






