ಕೆ.ಎನ್.ವೆಂಕಟ್ರಮಣ ಹೊಳ್ಳರಿಗೆ ಕುತ್ಯಾಳದಲ್ಲಿ ಚಿನ್ನದ ಪದಕದೊಂದಿಗೆ ಸರ್ವಕ್ಷೇತ್ರ ಸಾಧಕ ಪ್ರಶಸ್ತಿ ಪ್ರದಾನ

ಕಾಸರಗೋಡು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಸಂಭ್ರಮದ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜಗದ್ಗುರು ಶ್ರೀ ಶಂಕರಾಚಾರ್ಯ ಪೀಠ ಎಡನೀರು ಸಂಸ್ಥಾನದ ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. 
ಈ ಸಂದರ್ಭದಲ್ಲಿ ಕುತ್ಯಾಳ ತರಬೇತಿ ಕೇಂದ್ರ ಹಾಗೂ ಕುತ್ಯಾಳ ಯಕ್ಷಗಾನ ಮೇಳದ ಪ್ರಾರಂಭದಿAದಲೂ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಧಾರ್ಮಿಕ, ಸಾಮಾಜಿಕ ಸಹಿತ ವಿವಿದs ಕ್ಷೇತ್ರಗಳಲ್ಲಿ ಸೇವೆಗೈಯ್ಯುತ್ತಿರುವ ಕೆ.ಎನ್.ವೆಂಕಟ್ರಮಣ ಹೊಳ್ಳ- ರೂಪಕಲಾ ದಂಪ ತಿಗೆ ಬಂಗಾರದ ಪದಕ, ಶಾಲು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರದೊಂದಿಗೆ ಸರ್ವ ಕ್ಷೇತ್ರ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಮಾನವಹಕ್ಕುಗಳ ಆಯೋಗದ ಅಧ್ಯಕ್ಷರ ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಅಗಲಿ ರಾಘವೇಂದ್ರ ರಾವ್, ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯ ಸತೀಶ್ ಅಡಪ ಸಂಕಬೈಲು, ವೈದ್ಯಾಧಿಕಾರಿ ಡಾ. ಜಯಶ್ರೀ ನಾಗರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ದಿನೇಶ್, ರಜತರಂಗದ ಅಧ್ಯಕ್ಷ ಡಾ. ಹರಿಕಿರಣ ಬಂಗೇರ, ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು, ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ್ ಕೂಡ್ಲು, ಕ್ಷೇತ್ರ ಅನುವಂಶಿಕ ಮೊಕ್ತೇಸರ ಕೆ. ಜಿ ಶ್ಯಾನುಭಾಗ್, ಕ್ಷೇತ್ರ ತಂತ್ರಿ ರಾಮಕಿಶೋರ ಅಸ್ರ, ರಜತರಂಗದ ಉಪಾಧ್ಯಕ್ಷ ವೈದಿಕ ಶಿರೋಮಣಿ ನಾಗೇಂದ್ರ ಭಟ್ ಉಪಸ್ಥಿತರಿದ್ದರು. ವಿ.ಜಿ. ಕಾಸರಗೋಡು ಸ್ವಾಗತಿಸಿ ನಾ.ಕಾರಂತ ಪೇರಾಜೆ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೂಡ್ಲು ವಂದಿಸಿದರು.

RELATED NEWS

You cannot copy contents of this page